ನಿಮಗಿದು ಗೊತ್ತೇ; ಬರುತ್ತಿದೆ ವೆಸ್ಪಾ ಪ್ರೀಮಿಯಂ ಸ್ಕೂಟರ್

By Nagaraja

ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಪಿಯಾಜಿಯೊ, ಭಾರತದಲ್ಲಿ ವೆಸ್ಪಾ ನೂತನ ಪ್ರೀಮಿಯಂ ವೆರಿಯಂಟ್ ಲಾಂಚ್ ಮಾಡಿದೆ. ದೇಶದಲ್ಲಿ ವೆಸ್ಪಾ ಬ್ರಾಂಡ್‌ಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವುದೇ ನೂತನ ವೆರಿಯಂಟ್ ಲಾಂಚ್ ಮಾಡಲು ಕಾರಣವಾಗಿದೆ.

ವೆಸ್ಪಾ ಪ್ರೀಮಿಯಂ ವಿಎಕ್ಸ್ 125 ವೆರಿಯಂಟ್ ವೈಶಿಷ್ಟ್ಯಗಳೇನು?

  • ಫ್ರಂಟ್ ಡಿಸ್ಕ್ ಬ್ರೇಕ್,
  • ಹೊಸ ಕಲರ್ ವೆರಿಯಂಟ್,
  • ಟ್ಯೂಬ್‌ಲೆಸ್ ಟೈರ್
  • ಬೀಗ್ ಸೀಟ್ ಆಯ್ಕೆ

ಪ್ರಸಕ್ತ ತಿಂಗಳಲ್ಲೇ ವೆಸ್ಪಾ ಪ್ರೀಮಿಯಂ ವಿಎಕ್ಸ್ 125 ವೆರಿಯಂಟ್ ಮಾರುಕಟ್ಟೆ ಪ್ರವೇಶಿಸಲಿದೆ. ಇತರ ವೆಸ್ಪಾಗಳಿಗೆ ಹೋಲಿಸಿದರೆ ವೆಸ್ಪಾ ವಿಕ್ಸ್ ವೆರಿಯಂಟ್ ಆಲ್ ನ್ಯೂ ವೆರಿಯಂಟ್ ಆಗಿರಲಿದ್ದು, ಫೆಸ್‌ಲಿಫ್ಟ್ ಮಾದರಿ ಅಲ್ಲ ಎಂಬುದನ್ನು ಕಂಪನಿ ಖಚಿತಪಡಿಸಿದೆ.

2013 Vespa VX125

ನೂತನ ವೆಸ್ಪಾದಲ್ಲಿ 200 ಎಂಎಂ ಫ್ರಂಟ್ ಡಿಸ್ಕ್ ಪಡೆಯಲಿದೆ. ಈ ಮೂಲಕ ಸ್ಟಾಂಡರ್ಡ್ ವೆರಿಯಂಟ್‌ನಲ್ಲಿರುವ ಕೊರತೆಯನ್ನು ನೀಗಿಸಲಿದೆ. ಇದರ ಜತೆಗೆ ಇನ್ಟ್ರುಮೆಂಟೇಷನ್ ಕ್ಲಸ್ಟರ್, ಬೀಗ್ ಸೀಟ್ ಆಯ್ಕೆ ಜತೆಗೆ ಮೆಟ್ಯಾಲಿಕ್ ಗ್ರೀನ್, ಡ್ಯುಯಲ್ ಟೋನ್ ರೆಡ್ ಆಂಡ್ ಪಿಂಕ್ ಕಲರ್ ಆಪ್ಷನ್ ಇರಲಿದೆ.

2013 Vespa VX125

ಆದರೆ ಎಂಜಿನ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ನೂತನ ವೆಸ್ಪಾ ವಿಎಕ್ಸ್ ವೆರಿಯಂಟ್ ಕೂಡಾ 125ಸಿಸಿ ಫೋರ್ ಸ್ಟ್ರೋಕ್, 3 ವಾಲ್ವೆ ಸಿಂಗಲ್ ಸಿಲಿಂಡರ್ ಎಂಜನ್‌ನಿಂದ ನಿಯಂತ್ರಿಸಲ್ಪಡಲಿದ್ದು 10.06 ಪಿಸ್ ಪವರ್ (7,500 ಆರ್‌ಪಿಎಂ, 10.6 ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

2013 Vespa VX125

ಇನ್ನು ಆಟೋಮ್ಯಾಟಿಕ್ ಸಿವಿಟಿ ಟ್ರಾನ್ಸ್‌ಮಿಷನ್ ಸಮಾನವಾಗಿರಲಿದೆ. ಇದರ ಪರಿಷ್ಕೃತ ಎಂಆರ್‌ಎಫ್ ಜಾಪ್ಪರ್ ಟ್ಯೂಬ್‌ಲೆಸ್ ಟೈರ್ ಉತ್ತಮ ಗುಣಮಟ್ಟದ ರೈಡಿಂಗ್ ಅನುಭವ ನೀಡಲಿದೆ.

2013 Vespa VX125

ಹಾಗಿದ್ದರೂ ನೂತನ ಮಾಡೆಲ್ ದರದ ಬಗ್ಗೆ ಯಾವುದೇ ಮಾಹಿತಿ ಹೊರಗೆಡವಿಲ್ಲ. ಮೂಲಗಳ ಪ್ರಕಾರ ಈಗಿರುವ ಮಾದರಿಗಿಂತ ದರ ಸ್ವಲ್ಪ ದುಬಾರಿಯಾಗಿರಲಿದೆ. ಅಂದ ಹಾಗೆ ಪ್ರತಿ ತಿಂಗಳು 4,500ರಷ್ಟು ಯುನಿಟ್ ಸೇಲ್ ಮಾಡುವಲ್ಲಿ ವೆಸ್ಪಾ ಯಶಸ್ವಿಯಾಗುತ್ತಿದೆ.

More from DriveSpark

Article Published On: Friday, June 14, 2013, 10:30 [IST]
English summary
Piaggio may not have reached the desired sales number since launching the Vespa LX125, but that is not stopping the Italian marque from introducing a new, pricier variant, Vespa VX125 in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+