2 ಪಲ್ಸರ್, 6 ಡಿಸ್ಕವರ್ ವೆರಿಯಂಟ್ ಲಾಂಚ್ ಮಾಡಲಿರುವ ಬಜಾಜ್
ಭಾರತೀಯ ಮಾರುಕಟ್ಟೆಯಲ್ಲಿ ನಂ.2 ಸ್ಥಾನ ನಷ್ಟವಾಗಿರುವುದನ್ನು ಗಂಭೀರವಾಗಿಯೇ ಪರಿಗಣಿಸಿರುವ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ, ಸದ್ಯದಲ್ಲೇ ಜನಪ್ರಿಯ ಆವೃತ್ತಿಗಳಾದ ಪಲ್ಸರ್‌ನ ಎರಡು ಹೊಸ ಹಾಗೂ ಡಿಸ್ಕವರ್‌ನ ಆರು ನೂತನ ವೆರಿಯಂಟ್‌ಗಳನ್ನು ದೇಶಕ್ಕೆ ಪರಿಚಯಿಸಲಿದೆ.
ಮುಂದಿನ 12 ತಿಂಗಳ ಅವಧಿಯತ್ತ ಹದ್ದಿನ ಕಣ್ಣಿಟ್ಟಿರುವ ಬಜಾಜ್ ಈ ಮೂಲಕ ಮತ್ತೆ ಮಾರಾಟ ಪ್ರಗತಿ ನಿರೀಕ್ಷಿಸುತ್ತಿದೆ. ಗ್ರಾಹಕರಿಗೆ ಪಾಲಿಗೆ ಈ ಸುದ್ದಿ ಶುಭಕರವಾಗಿ ಪರಿಣಮಿಸಿದೆ. ಮೂಲಗಳ ಪ್ರಕಾರ ಪಲ್ಸರ್‌ನ ಎರಡು ವೆರಿಯಂಟ್ ಇದೇ ವರ್ಷ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದರಲ್ಲಿ ಈಗ ಮಾರುಕಟ್ಟೆಯಲ್ಲಿ 200 ಎನ್ಎಸ್‌ಗಿಂತಲೂ ಚಿಕ್ಕದಾದ ಹಾಗೂ ಇನ್ನೊಂದು ದೊಡ್ಡ ವೆರಿಯಂಟ್ ಹೊಂದಿರಲಿದೆ.
ಮೊದಲು ಲಾಂಚ್ ಆಗಲಿರುವ 375 ಸಿಸಿ ಪಲ್ಸರ್ ರಹಸ್ಯ ಚಿತ್ರಣ ಈಗಾಗಲೇ ಹೊರಬಿದ್ದಿದೆ. ಹಾಗೆಯೇ ಸಣ್ಣ ಪಲ್ಸರ್ 150ಸಿಸಿನಿಂದ ನಿಯಂತ್ರಿಸಲ್ಪಡಲಿದೆ.
ಹಾಗೆಯೇ ಡಿಸ್ಕವರ್ ಆರು ನೂತನ ವೆರಿಯಂಟ್‌ಗಳು ಸೆಪ್ಟೆಂಬರ್‌ನ ಹಬ್ಬದ ಆವೃತ್ತಿ ವೇಳೆ ಮಾರುಕಟ್ಟೆ ಪ್ರವೇಶಿಸಲಿದೆ. ಈ ಪೈಕಿ ನಾಲ್ಕು ಆವೃತ್ತಿಗಳು 40 ಸಾವಿರದಿಂದ 50 ಸಾವಿರ ರು.ಗಳ ಅಸುಪಾಸಿನಲ್ಲಿರಲಿದೆ. ಉಳಿದ ಎರಡು ಆವೃತ್ತಿಗಳು 50 ಸಾವಿರಕ್ಕೂ ದುಬಾರಿಯಾಗಲಿದೆ.
ಪ್ರಸ್ತುತ ಡಿಸ್ಕವರ್ 150, 125, 125 ಎಸ್‌ಟಿ, 100ಟಿ ಹಾಗೂ 100 ಸಿಸಿಗಳಲ್ಲಿ ಲಭ್ಯವಿದೆ. ಈಗ ಲಭ್ಯವಿರುವ ಮಾಡೆಲ್‌ಗಳ ನಡುವೆ ಹೊಸ ವೆರಿಯಂಟ್‌ಗಳು ಕಾಣಿಸಿಕೊಳ್ಳಲಿದೆ.


Click it and Unblock the Notifications









