ಭಾಗ್ ಮಿಲ್ಖಾ ಭಾಗ್; ರಾಯಲ್ ಎನ್‌ಫೀಲ್ಡ್ ಗೆಲ್ಲಿರಿ!
ಭಾರತ ಕಂಡ ಮಹಾನ್ ಅಥ್ಲೀಟ್‌ಗಳಲ್ಲಿ ಒಬ್ಬರಾಗಿರುವ "ದಿ ಫ್ಲೈಯಿಂಗ್ ಸಿಖ್" ಖ್ಯಾತಿಯ ಮಿಲ್ಖಾ ಸಿಂಗ್ ಜೀವನ ಚರಿತ್ರೆ ಆಧಾರವಾಗಿಟ್ಟು ರಚಿಸಲಾಗಿರುವ ಬಾಲಿವುಡ್ ಚಿತ್ರ 'ಭಾಗ್ ಮಿಲ್ಖಾ ಭಾಗ್' ಜುಲೈ 12ರಂದು ತೆರೆಗೆ ಅಪ್ಪಳಿಸಿವೆ.
ಫರ್ಹಾನ್ ಅಖ್ತರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಭಾಗ್ ಮಿಲ್ಖಾ ಭಾಗ್' ಚಲನಚಿತ್ರದ ಹಾಡುಗಳು ಹಿಂದೂ ಧಾರ್ಮಿಕವಾದಿಗಳ ಕೋಪಕ್ಕೆ ಕಾರಣವಾಗಿತ್ತು. ಚಿತ್ರದ ಹಾಡುಗಳಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂಬ ಆರೋಪವಿದೆ. ಇವೆಲ್ಲದರ ನಡುವೆ ಚಿತ್ರ ತೆರೆಕಂಡಿದೆ.
ಭಾಗ್ ಮಿಲ್ಖಾ ಭಾಗ್ ಚಿತ್ರಕ್ಕೆ ನೋಡುಗರಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಬಾಕ್ಸ್ ಆಫೀಸ್ ಹಿಟ್ ಎನಿಸಿಕೊಳ್ಳುತ್ತಿದೆ. ಪ್ರಸ್ತುತ ಚಿತ್ರದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಗೆಲ್ಲುವ ಅವಕಾಶವಿದೆ. ವಿಶೇಷವೆಂದರೆ ಚಿತ್ರದಲ್ಲಿ ಬಳಸಲಾಗಿರುವ ರಾಯಲ್ ಎನ್‌ಫೀಲ್ಡ್ ಡೆಸರ್ಟ್ ಸ್ಟ್ರೋಮ್ ಮೋಟಾರ್ ಸೈಕಲ್ ಬೈಕ್ ನಿಮ್ಮದಾಗಿಸಬಹುದಾಗಿದೆ.
'2 ಲೆಜೆಂಡ್ 1 ಒಡಿಸ್ಸಿ' ಹೆಸರಿನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಸಕ್ತರು ಮಿಲ್ಖಾ ಸಿಂಗ್ ತರಹನೇ ಪರಿಶ್ರಮ, ಭಾವೋದ್ರೇಕ ಮತ್ತು ತ್ಯಾಗದ ಕಥೆಯನ್ನು ಹೇಳಬೇಕಾಗಿದೆ. ಹೆಚ್ಚಿನ ವಿವರಗಳಿಗಾಗಿ ಭೇಟಿ ಕೊಡಿ http://royalenfield.com/bmb
499 ಸಿಸಿ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಟ್ವಿನ್ ಸ್ಪಾರ್ಕ್ ಫ್ಯೂಯಲ್ ಇಂಜೆಕ್ಟಡ್ ಎಂಜಿನ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಡೆಸರ್ಟ್ ಸ್ಟ್ರೋಮ್ ಬೈಕ್ 27 ಅಶ್ವಶಕ್ತಿ (41.3 ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ. ಪ್ರಸ್ತುತ ಬೈಕಿನ ಎಕ್ಸ್ ಶೋ ರೂಂ ದರ 1.3 ಲಕ್ಷ ರು.ಗಳಾಗಿವೆ.


Click it and Unblock the Notifications









