ಫಾಸ್ಟ್ ಟ್ರಾಕ್ ವೈವಿಧ್ಯಮಯ ಹೆಲ್ಮೆಟ್ ನಿಮ್ಮದಾಗಿಸಿ
ಪ್ರತಿಯೊಬ್ಬ ದ್ವಿಚಕ್ರ ಸವಾರನೂ ಹೆಲ್ಮೆಟ್ ಧರಿಸಬೇಕಾಗಿರುವುದು ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ಗುಣಮಟ್ಟದ ಶಿರಸ್ತ್ರಾಣ ಆಯ್ಕೆ ಮಾಡುವುದು ಅತಿ ಅಗತ್ಯವಾಗಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಈ ಸಾಲಿಗೆ ಸೇರಿರುವ ಟೈಟಾನ್ ಇಂಡಸ್ಟ್ರೀಸ್‌ನ ಫಾಸ್ಟ್ ಟ್ರಾಕ್ ಜೀವನಶೈಲಿ ಬ್ರಾಂಡ್ ವೈವಿಧ್ಯಮಯ ಹೆಲ್ಮೆಟನ್ನು ಗ್ರಾಹರಿಗೆ ಪರಿಚಯಿಸುತ್ತಿದೆ.

ಈ ಹಿಂದೆ ಮೋಟಾರ್ ಸೈಕಲ್ ವಿಭಾಗಕ್ಕೂ ಪ್ರವೇಶಿಸುವುದಾಗಿಯೂ ಟೈಟಾನ್ ಘೋಷಿಸಿತ್ತು. ಇದೀಗ ಫಾಸ್ಟ್ ಟ್ರಾಕ್ ಬ್ರಾಂಡ್ ನಿಮ್ಮ ನೆಚ್ಚಿನ ಆಯ್ಕೆಯಾಗಿರಲಿದೆ.
ಅಂದ ಹಾಗೆ ಒಟ್ಟು 24 ವಿಭಿನ್ನ ಶೈಲಿಗಳ ಫಾಸ್ಟ್ ಟ್ರಾಕ್ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದು ರು. 1495 ರು.ಗಳಿಂದ ಹಿಡಿದು 3495 ರು.ಗಳ ವರೆಗಿದೆ.
ಭಾರತವು ಅತಿ ಹೆಚ್ಚು ದ್ವಿಚಕ್ರ ಸವಾರರನ್ನು ಹೊಂದಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಫಾಸ್ಟ್ ಟ್ರಾಕ್ ಹೆಲ್ಮೆಟ್‌ಗಳಿಗೂ ಬೇಡಿಕೆ ಹೆಚ್ಚುವ ಸಾಧ್ಯತೆಗಳಿದೆ.


Click it and Unblock the Notifications