ಭಾರತದಲ್ಲಿ ಅಗ್ಗದ ಬೈಕ್ ಲಾಂಚ್ ಮಾಡಲಿರುವ ಹರ್ಲಿ
ಅಮೆರಿಕದ ಮೂಲದ ಪ್ರತ್ಯಾತ ದ್ವಿಚಕ್ರ ತಯಾರಕ ಕಂಪನಿಯಾಗಿರುವ ಹರ್ಲಿ ಡೇವಿಡ್ಸನ್, ನಿಕಟ ಭವಿಷ್ಯದಲ್ಲಿ ಭಾರತಕ್ಕೆ ಅಗ್ಗದ ದರದ 500ಸಿಸಿ ಬೈಕನ್ನು ಪರಿಚಯಿಸುವ ಯೋಜನೆ ಹೊಂದಿರುವುದಾಗಿ ಆಟೋ ಮೂಲಗಳು ವರದಿ ಮಾಡಿವೆ.
ಈ ಬಹುನಿರೀಕ್ಷಿತ ಬೈಕ್ ಇನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಉತ್ಪಾದಕಾ ವರ್ಷನ್ ಇನ್ನಷ್ಟೇ ಆಗಮನವಾಗಬೇಕಿದೆ. ಹಾಗಾಗಿ ಸದ್ಯ ಹರ್ಲಿ ಡೇವಿಡ್ಸನ್ ಬೈಕ್ ಯಾವಾಗ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ ಎಂಬುದನ್ನು ನಿಖರವಾಗಿ ತಿಳಿಸುವುದು ಅಸಾಧ್ಯ.
ಏಷ್ಯಾ ಖಂಡದ ಬೈಕ್ ಪ್ರಿಯರನ್ನು ಪ್ರಮುಖವಾಗಿಯೂ ಬೆಳೆದು ಬರುತ್ತಿರುವ ಭಾರತದಂತಹ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡು ಈ ಕಡಿಮೆ ವೆಚ್ಚದ ಬೈಕ್ ತಯಾರಿಸಲಾಗುತ್ತಿದೆ. ಇದರ ದರ ನಾಲ್ಕರಿಂದ ಐದು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಅಂದರೆ ಸಾಮಾನ್ಯ ಹರ್ಲಿ ಡೇವಿಡ್ಸನ್ ಬೈಕ್‌ಗಳಿಗೆ ಹೋಲಿಸಿದರೆ ದರ ತುಂಬಾನೇ ಕಡಿಮೆಯಾಗಿರಲಿದೆ.
ಮೂಲಗಳ ಪ್ರಕಾರ ಹರ್ಲಿ ಡೇವಿಡ್ಸನ್ ಜಿ ಫ್ಲಾಟ್‌ಫಾರ್ಮ್‌ನಲ್ಲಿ ನೂತನ ಬೈಕ್ ಸಿದ್ಧಗೊಳ್ಳಲಿದೆ. ಇದುವರೆಗೆ ಹರ್ಲಿ ಡೇವಿಡ್ಸನ್ ಬೈಕ್‌ಗಳು ಕಂಪ್ಲೀಟ್ ನಾಕ್ಡ್ ಡೌನ್ (ಸಿಕೆಡಿ) ಸಿದ್ಧಾಂತ ಮೂಖಾಂತರ ಆಗಮನವಾಗುತ್ತಿದ್ದವು. ಆದರೆ ನೂತನ 500ಸಿಸಿ ಬೈಕ್ ಸ್ಥಳೀಯವಾಗಿ ಜೋಡಣೆ ಕಾರ್ಯ ನಡೆಯಲಿರುವುದರಿಂದ ಕಡಿಮೆ ದರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲು ನೆರವಾಗಲಿದೆ. ಇದು ದೇಶದಲ್ಲಿ ಹರ್ಲಿ ಕ್ರೂಸರ್ ಬೈಕ್ ಕನಸು ಕಂಡಿರುವ ಗ್ರಾಹಕರ ಅಭಿಲಾಷೆಯನ್ನು ಈಡೇರಿಸಲಿದೆ.


Click it and Unblock the Notifications









