100% 'ಮೇಡ್ ಇನ್ ಇಂಡಿಯಾ ಬೈಕ್' ಹೀರೊ ಗುರಿ

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಹೀರೊ ಮೊಟೊಕಾರ್ಪ್, ಮುಂದಿನ ಕೆಲವು ವರ್ಷಗಳೊಳಗೆ ಶೇಕಡಾ 100ರಷ್ಟು ದೇಶಿಯವಾಗಿ ನಿರ್ಮಿಸಲ್ಪಟ್ಟ ಬೈಕ್ ಉತ್ಪಾದಿಸುವ ಗುರಿಯಿರಿಸಿಕೊಂಡಿದೆ.

ಈ ಹಿಂದೆ ಜಪಾನ್ ಮೂಲದ ಹೋಂಡಾ ಜತೆಗೆ ತಾಂತ್ರಿಕ ಒಪ್ಪಂದ ಮಾಡಿಕೊಂಡಿದ್ದ ಹೀರೊ ದೇಶದಲ್ಲಿ ಬೈಕ್ ಮಾರಾಟ ನಡೆಸಿತ್ತು. ಆ ಬಳಿಕ ಹೋಂಡಾ ಜತೆಗಿನ ಬಾಂಧವ್ಯ ಕಡಿದುಕೊಂಡ ಬಳಿಕ ಅಮೆರಿಕ ಮೂಲದ ಇಬಿಆರ್ ಜತೆ ಪಾಲುದಾರಿಕೆ ಹೊಂದಿತ್ತು.

ಶೇಕಡಾ 100ರಷ್ಟು ದೇಶಿಯವಾಗಿ ನಿರ್ಮಿಸಿದ ಬೈಕ್ ನಿರ್ಮಿಸುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಕೆಲವು ವರ್ಷಗಳ ಕಾಲವಕಾಶ ಅಗತ್ಯವಿದೆ ಎಂದು ಹೀರೊ ಮೊಟೊಕಾರ್ಪ್ ಕಾರ್ಯನಿರ್ವಾಹಕ ಮುಖ್ಯಸ್ಥ ಪವನ್ ಮುಂಜಾಲ್ ತಿಳಿಸಿದ್ದಾರೆ.

ಆಫ್-ರೋಡ್ ಬೈಕ್
ಇದೇ ಸಂದರ್ಭದಲ್ಲಿ ನಿಕಟ ಭವಿಷ್ಯದಲ್ಲೇ ಕಂಪನಿಯು ಆಫ್ ರೋಡ್ ಬೈಕ್‌ಗಳನ್ನು ಭಾರತ ಮಾರುಕಟ್ಟೆಗೆ ಪರಿಚಯಿಸುವುದಾಗಿ ಪವನ್ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಕ್ರೀಡಾ ಸ್ನೇಹಿ ಬೈಕ್‌ಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂಬುದನ್ನು ಸಹ ಅವರು ಉಲ್ಲೇಖಿಸಿದರು.

ವಿದೇಶಗಳಲ್ಲಿ ನೂತನ ಘಟಕ...
ಏತನ್ಮಧ್ಯೆ ಮೆಕ್ಸಿಕೊ ಹಾಗೂ ಕೀನ್ಯಾಗಳಂತಹ ರಾಷ್ಟ್ರಗಳಲ್ಲಿ ನೂತನ ಘಟಕ ಆರಂಭಿಸುವ ಕುರಿತಾಗಿಯೂ ಪವನ್ ಮಾಹಿತಿ ನೀಡಿದರು.

ಈ ನಡುವೆ ಕಂಪನಿಯು 50 ದಶಲಕ್ಷ ಬೈಕ್‌ಗಳ ಉತ್ಪಾದನೆಯ ಮೈಲುಗಲ್ಲನ್ನು ತಲುಪಿರುವುದಾಗಿ ಕಂಪನಿ ತಿಳಿಸಿದೆ. ಅಂದ ಹಾಗೆ 2000ನೇ ಇಸವಿಯಲ್ಲಿ ನಾಲ್ಕು ದಶಲಕ್ಷ ಬೈಕ್‌ಗಳನ್ನು ಉತ್ಪಾದಿಸಿತ್ತು. ಈ ಮೂಲಕ ಅತಿ ವೇಗದಲ್ಲಿ 50 ದಶಲಕ್ಷ ಬೈಕ್‌ಗಳನ್ನು ಉತ್ಪಾದಿಸಿದ ಜಗತ್ತಿನ ದ್ವಿಚಕ್ರ ತಯಾರಕ ಸಂಸ್ಧೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

More from DriveSpark

Article Published On: Monday, August 12, 2013, 12:41 [IST]
English summary
The country’s largest two-wheeler manufacturer Hero MotoCorp on Thursday said that the company will launch products developed 100 per cent in India in the next few years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+