ಮೆಗ್ನೆಟಿ ಮರೆಲ್ಲಿ ಜತೆ ಹೀರೊ ಒಪ್ಪಂದ
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಇಟಲಿಯ ಮುಂದುವರಿದ ಎಂಜಿನಿಯರಿಂಗ್ ಸಂಸ್ಥೆಯಾಗಿರುವ ಮೆಗ್ನೆಟಿ ಮರೆಲ್ಲಿ ಜತೆ ಒಪ್ಪಂದ ಮಾಡಿಕೊಂಡಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಮೆಗ್ನೆಟಿ ಮರೆಲ್ಲಿ ಜತೆ 40-60ರ ಅನುಪಾತದಲ್ಲಿ ಹೀರೊ ಮೊಟೊಕಾರ್ಪ್ ಒಪ್ಪಂದ ಮಾಡಿಕೊಂಡಿದೆ. ಅಂದರೆ ಮುಂದಿನ 10 ವರ್ಷಗಳ ವರೆಗೆ 27 ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಮಾಡಲಾಗಿದೆ.

ಈ ಮೂಲಕ ಬರೋಬ್ಬರಿ 200 ಮಿಲಿಯನ್ ಮಾರಾಟ ಗುರಿಯಿರಿಸಿಕೊಳ್ಳಲಾಗಿದೆ. ಇದರ ಪ್ರಮುಖ ಉದ್ದೇಶ ಮುಂದಿನ ತಲೆಮಾರಿನ ಪವರ್‌ಟ್ರೈನ್ ತಂತ್ರಜ್ಞಾನ ಅಭಿವೃದ್ಧಿಪಡಿಸುವುದಾಗಿದೆ. ಇದರಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಸಹ ಸೇರಿರಲಿದೆ.
ಇವೆಲ್ಲವೂ ಹೀರೊ ಉತ್ಪನ್ನಗಳನ್ನು ಇನ್ನಷ್ಟು ಮಾರಾಟ ಸಾಧಿಸಲು ನೆರವಾಗಲಿದೆ. ಅಂದ ಹಾಗೆ ಎಚ್‌ಎಂಸಿ-ಎಂಎಂ ಆಟೋ ಲಿಮಿಟ್ ಕಾರ್ಯಾಚರಣೆ 2014ರ ವರ್ಷಾಂತ್ಯದಲ್ಲಿ ಆರಂಭವಾಗಲಿದೆ.


Click it and Unblock the Notifications








