ಹೀರೊ ಮೊಟೊಕಾರ್ಪ್ ನಿವ್ವಳ ಲಾಭ ಕುಸಿತ
ನಿರೀಕ್ಷೆಯಂತೆಯೇ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೆಟೊಕಾರ್ಪ್ ನಿವ್ವಳ ಲಾಭಾಂಶದಲ್ಲಿ ಶೇಕಡಾ 10.7ರಷ್ಟು ಕುಸಿತ ದಾಖಲಾಗಿದೆ.
ಜೂನ್ 30ಕ್ಕೆ ಮುಕ್ತಾಯಗೊಂಡ 2013-14 ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಒಟ್ಟು 548.58 ಕೋಟಿ ರು.ಗಳ ನಿವ್ವಳ ಲಾಭಾಂಶ ಗಳಿಸಿದೆ. ಆದರೆ ಕಳೆದ ಸಾಲಿನ ಇದೇ ಅವಧಿಯಲ್ಲಿ ಕಂಪನಿಯು 615.46 ಕೋಟಿ ರುಪಾಯಿ ನಿವ್ವಳ ಲಾಭ ಗಿಟ್ಟಿಸಿಕೊಂಡಿತ್ತು. ಅಂದರೆ ಒಟ್ಟು ಲಾಭಾಂಶದಲ್ಲಿ ಶೇಕಡಾ 10.7ರಷ್ಟು ಕುಸಿತ ದಾಖಲಿಸಿದೆ.
ಹಾಗೆಯೇ ಒಟ್ಟು ಮಾರಾಟವು ಶೇಕಡಾ 1.30ರಷ್ಟು ಇಳಿಕೆ ಕಂಡಿದ್ದು, ಕಳೆದ ವರ್ಷದ 6,207.78 ಕೋಟಿ ರು.ಗಳಿಂದ 6,126.84 ಕೋಟಿ ರು.ಗಳಿಗೆ ಇಳಿಕೆಯಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಮಾರಾಟವನ್ನು ಯುನಿಟ್‌ಗೆ ಪರಿವರ್ತಿಸದಾಗ ಕಳೆದ ವರ್ಷ ಮೊದಲ ತ್ರೈಮಾಸಿಕ ಅವಧಿಯಲ್ಲಿ 16,42,292 ಯುನಿಟ್‌ಗಳಿಂದ ಪ್ರಸಕ್ತ ಸಾಲಿನಲ್ಲಿ 15,59,282 ಯುನಿಟ್‌ಗಳಿಗೆ ಕುಸಿತ ಕಂಡಿದೆ. ಇಲ್ಲಿಯೂ ಶೇಕಡಾ 5.05ರಷ್ಟು ಕುಸಿತ ದಾಖಲಿಸಿದೆ.


Click it and Unblock the Notifications









