ಹೀರೊ ಬೈಕ್‌ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

By Nagaraja

ದೇಶದ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೊ ಮೊಟೊಕಾರ್ಪ್ ಮಾಡೆಲ್‌ಗಳಿಗೆ ದೇಶದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 2013 ಮೇ ತಿಂಗಳ ಅಂಕಿಅಂಶವು ಹೀರೊ ಯಶಸ್ಸನ್ನು ಎತ್ತಿ ಹಿಡಿಯುತ್ತಿದೆ.

ಮೇ ತಿಂಗಳಲ್ಲಿ 5,57,890 ಯುನಿಟ್ ಮಾರಾಟ ದಾಖಲಿಸಿಕೊಂಡಿರುವ ಹೀರೊ ಮೊಟೊಕಾರ್ಪ್ ಶೇಕಡಾ 0.22ರಷ್ಟು ಏರಿಕೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5,56,644 ಯುನಿಟ್ ಮಾತ್ರ ಮಾರಾಟವಾಗಿತ್ತು.

ಮಾರುಕಟ್ಟೆ ಕುಸಿದಿರುವ ಹಿನ್ನಲೆಯಲ್ಲಿ ಹೀರೊ ಇತ್ತೀಚೆಗಷ್ಟೇ ನೂತನವಾಗಿ ಬೈಕ್ ಖರೀದಿಸುವ ಗ್ರಾಹಕರಿಗೆ ಐದು ವರ್ಷಗಳ ಗ್ಯಾರಂಟಿ ಭರವಸೆ ನೀಡಿತ್ತು. ಇದು ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ಬೀರುವಲ್ಲಿ ಯಶಸ್ವಿಯಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಪ್ರಸ್ತುತ ಮುಂಗಾರು ಮಳೆ ಆರಂಭವಾಗಿರುವಂತೆಯೇ ಇದೇ ರೀತಿಯ ಆವೇಗ ಕಾಯ್ದುಕೊಳ್ಳುವ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ. ದೇಶದಲ್ಲಿ ಹೀರೊ ಬೈಕ್‌ಗಳಿಗೆ ಹೋಂಡಾದಿಂದ ಉತ್ತಮ ಸ್ಪರ್ಧೆ ಏರ್ಪಟ್ಟಿದೆ.

More from DriveSpark

Article Published On: Tuesday, June 4, 2013, 15:38 [IST]
English summary
The country's largest two-wheeler maker Hero MotoCorp reported a marginal increase in its total sales at 5,57,890 units for May this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+