ಹೋಂಡಾ ಸ್ಕೂಟರ್ ನೀಡಲಿದೆ 60 ಕೀ.ಮೀ ಮೈಲೇಜ್!

By Nagaraja

ದೇಶದ ಆಟೋಮ್ಯಾಟಿಕ್ ಸ್ಕೂಟರ್ ತಯಾರಕ ಕಂಪನಿಗಳ ಪೈಕಿ ಮುಂಚೂಣಿಯಲ್ಲಿರುವ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ಸ್ ಇಂಡಿಯಾ ಸದ್ಯದಲ್ಲೇ ಪರಿಷ್ಕೃತ ಆವೃತ್ತಿಗಳನ್ನು ಬಿಡುಗಡೆಗೊಳಿಸಲಿದೆ. ಇದರಂತೆ ಗ್ರಾಹಕರ ಬೇಡಿಕೆಯನ್ನು ಪರಿಗಣಿಸಿರುವ ಸಂಸ್ಥೆಯು ಪ್ರಮುಖವಾಗಿ ಮೈಲೇಜ್ ಉತ್ತೇಜಿಸುವತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.

ಹೋಂಡಾ ಇಕೊ-ತಂತ್ರಜ್ಞಾನವು ಸ್ಕೂಟರ್ ಮೈಲೇಜ್ ಅನ್ನು ಪ್ರತಿ ಲೀಟರ್‌ಗೆ 60 ಕೀ.ಮೀ. ತನಕ ಹೆಚ್ಚಿಸುವ ಸಾಮರ್ಥ್ಯ ಹೊಂದಿರಲಿದೆ. ಇದು ಸ್ಕೂಟರ್ ಪ್ರಿಯರನ್ನು ಆಕರ್ಷಿಸುವಲ್ಲಿ ಕಾರಣವಾಗಿದೆ.


ಎಲ್ಲ ಮೂರು ಹೋಂಡಾ ಸ್ಕೂಟರ್‌ಗಳು 110ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ ಇದರ ಸಿವಿಟಿ ಗೇರ್ ಬಾಕ್ಸ್ ನಿರ್ವಹಣೆ ಮೇಲೆ ಯಾವುದೇ ಪರಿಣಾಮ ಬೀರದಂತೆ ಇಂಧನ ಬಳಕೆಯನ್ನು ಕಡಿಮೆ ಮಾಡಲಿದೆ.

ಹಿಂದಿನಿಂದಲೂ ಮೈಲೇಜ್ ಹಾಗೂ ವಿಶ್ವಾಸಾರ್ಹತೆಗೆ ಹೋಂಡಾ ಸ್ಕೂಟರ್‌ಗಳು ಹೆಸರುವಾಸಿಯಾಗಿದೆ. ಇದೀಗ ಸುಧಾರಿತ ಮೈಲೇಜ್‌ನೊಂದಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುವ ನಿರೀಕ್ಷೆಯಿದೆ.

ಮೇಲೆ ತಿಳಿಸಿದಂತೆ ಹೊಸ ತಂತ್ರಗಾರಿಕೆಯ ಆಳವಡಿಕೆಯಿಂದಾಗಿ ಶೇಕಡಾ 11ರಷ್ಟು ಮೈಲೇಜ್ ವೃದ್ಧಿಸಲು ಸಾಧ್ಯವಾಗಿರುವುದಾಗಿ ಹೋಂಡಾ ಅಭಿಪ್ರಾಯಪಟ್ಟಿದೆ. ಒಂದು ವೇಳೆ 60 ಕೀ.ಮೀ ಮೈಲೇಜ್ ನೀಡುವಲ್ಲಿ ಸಾಧ್ಯವಾದಲ್ಲಿ ಹೋಂಡಾ ದೇಶದ ಸಮರ್ಥ ಸ್ಕೂಟರ್ ಬ್ರಾಂಡ್ ಎನಿಸಿಕೊಳ್ಳಲಿದೆ.

ಕೇವಲ ಮೈಲೇಜ್ ಮಾತ್ರ ಹೋಂಡಾದ ಆಕರ್ಷಣೆಯಲ್ಲ. ಬದಲಾಗಿ ಏವಿಯೇಟರ್ ಹಾಗೂ ಡಿಯೊ ಆವೃತ್ತಿಗಳಿಗೆ ಹೊಸ ಕಲರ್ ವೆರಿಯಂಟ್ ಕೂಡಾ ನೀಡಲಾಗಿದೆ. ಏವಿಯೇಟರ್ ಇದೀಗ ಲಭ್ಯವಿರುವ ಕಲರ್ ವೆರಿಯಂಟ್ ಜತೆ ಮೆಟ್ಯಾಲಿಕ್ ರೋಯಲ್ ಗೋಲ್ಡ್ ಕಲರ್ ಸೇರ್ಪಡೆಯಾಗಲಿದೆ. ಹಾಗೆಯೇ ಡಿಯೊ ಹೊಸತಾದ ಪೀಯರ್ಲ್ ಯಲ್ಲೊ ಕಲರ್ ಪಡೆಯಲಿದೆ. ಹಾಗಿದ್ದರೂ ಅತಿ ಹೆಚ್ಚು ಮಾರಾಟವಾಗುತ್ತಿರುವ ಆಕ್ಟಿವಾ ಸ್ಕೂಟರ್‌ಗೆ ಹೊಸ ಕಲರ್ ವೆರಿಯಂಟ್ ನೀಡಲಾಗಿಲ್ಲ.

ಇನ್ನು ದರ ವಿಷಯಕ್ಕೆ ಆಗಮಿಸಿದರೆ ಹೋಂಡಾ ಡಿಯೊ ಪ್ರಾರಂಭಿಕ ದರ 44,701 ರು.ಗಳಾಗಿವೆ. ಹಾಗೆಯೇ ಆಕ್ಟಿವಾ ದರ 47,188ರಿಂದ ಪ್ರಾರಂಭವಾಗುತ್ತಿದೆ. ಅಂತೆಯೇ ಏವಿಯೇಟರ್ ಸ್ಟಾಂಡರ್ಡ್ ವೆರಿಯಂಟ್ ದರ 48,212 ರು.ಗಳಿಂದ ಆರಂಭವಾಗುತ್ತಿದೆ. (ಎಕ್ಸ್ ಶೋ ರೂಂ ದೆಹಲಿ)

More from DriveSpark

Article Published On: Saturday, January 19, 2013, 13:06 [IST]
English summary
Honda Motorcycles and Scooters India, the leading manufacturer of automatic scooters in India has refreshed its line-up of scooters. Honda's new scooters get several updates but the most notable one is the Honda-Eco-Technology which will help improve their mileage to an impressive 60kmpl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+