'ಹೀರೊ'ಯಿಸಂ ಖತಂ; ಹೋಂಡಾ ದೇಶದ ನಂ.1 ಟು ವೀಲ್ಹರ್?

Posted By:
To Follow DriveSpark On Facebook, Click The Like Button
ಕಳೆದ ಕೆಲವು ತಿಂಗಳುಗಳಿಂದ ವಾಹನ ಮಾರುಕಟ್ಟೆಯು ಕುಸಿತದತ್ತ ಮುಖ ಮಾಡಿರುವಂತೆಯೇ ಇನ್ನಿತರ ಕೆಲವು ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳು ಇದೇ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ಪ್ರಸ್ತುತ ಬಂದಿರುವ ಮಾಹಿತಿ ಪ್ರಕಾರ, ಸಮಕಾಲೀನ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಇಳಿಕೆ ಪ್ರಕ್ರಿಯೆ ಮುಂದುವರಿದರೆ 2015-16ರ ವೇಳೆಗೆ ಜಪಾನ್ ದ್ವಿಚಕ್ರ ವಾಹನ ಉತ್ಪಾದಕ ಕಂಪನಿಯಾದ ಹೋಂಡಾ ಮೋಟಾರ್ ಕಂಪನಿ ದೇಶದಲ್ಲಿ ನಂ.1 ಸ್ಥಾನ ವಶಪಡಿಸಿಕೊಳ್ಳಲಿದೆ.

ಇದು ಈಗಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಮೊಟೊಕಾರ್ಪ್ ಸಂಸ್ಥೆಯನ್ನು ಹಿಂದಕ್ಕೆ ತಳ್ಳಲಿದೆ. ಹೋಂಡಾ ಪ್ರಕಾರ ಆ ಹೊತ್ತಿನ ವೇಳೆಗೆ ಬಜಾಜ್ ಆಟೋ ಪ್ರಮುಖ ಪ್ರತಿಸ್ಪರ್ಧಿಯಾಗಿ ಬೆಳೆದು ಬರಲಿದೆ.

ಹೀರೊ ಜತೆಗಿನ 26 ವರ್ಷಗಳ ಪಾಲುದಾರಿಕೆಯನ್ನು ಕಡಿದುಕೊಂಡಿದ್ದ ಹೋಂಡಾ, ಪ್ರಸ್ತುತ ದ್ವಿತೀಯ ಸ್ಥಾನದಲ್ಲಿದೆ. ಇದೀಗಷ್ಟೇ 150 ಸಿಸಿ ಟ್ರಿಗರ್ ಬೈಕ್ ಲಾಂಚ್ ಮಾಡಿರುವ ಬಜಾಜ್ ಆಟೋ ತೃತೀಯ ಸ್ಥಾನದಲ್ಲಿದೆ.

ಆಟೋ ಜಗತ್ತಿನ ಸಿಯಾಮ್ (SIAM) ವರದಿ ಪ್ರಕಾರ, ಹೋಂಡಾ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (HMSI) 2012 ಎಪ್ರಿಲ್‌ನಿಂದ 2013 ಫೆಬ್ರವರಿ ಅವಧಿಯಲ್ಲಿ 23.67 ಲಕ್ಷ ಯುನಿಟ್‌ಗಳನ್ನು ಸೇಲ್ ಮಾಡಿದೆ. ಅದೇ ಹೊತ್ತಿಗೆ ಬಜಾಜ್ ಆಟೋ 22.82 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಿವೆ. ಆದರೆ ನಂ.1 ಸ್ಥಾನದಲ್ಲಿರುವ ಹೀರೊ ಈ ಅವಧಿಯಲ್ಲಿ 54.61 ಲಕ್ಷ ಯುನಿಟ್‌ಗಳನ್ನು ಸೇಲ್ ಮಾಡಿದ್ದು ಮೊದಲ ಸ್ಥಾನದಲ್ಲಿದೆ. ಆದರೆ ಮಾರುಕಟ್ಟೆ ಕುಸಿತ ಮುಂದುವರಿದರೆ ಹೀರೊ ತನ್ನ ನಂ.1 ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದೆ.

English summary
Japanese auto major Honda Motor Co today said it could become the number one two-wheeler maker in India by 2015-16 if the current market slowdown prolonged.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark