ಹೋಂಡಾದಿಂದ 150 ಸಿಸಿ ಬೈಕ್ ನಿರೀಕ್ಷಿಸಿ!
ತನ್ನ ದೀರ್ಘ ಕಾಲದ ಜತೆಗಾರ ಹೀರೊ ಜತೆಗಿನ ಪಾಲುದಾರಿಕೆಯನ್ನು ಕಡಿದುಕೊಂಡ ಬಳಿಕ ದೇಶದಲ್ಲಿ ತನ್ನದೇ ಆದ ಮಾರುಕಟ್ಟೆಯನ್ನು ರಚಿಸುತ್ತಿರುವ ಹೋಂಡಾ, ಹೀರೊ ಹಂಕ್, ಯಮಹಾ ಎಫ್‌ಝಡ್16 ಹಾಗೂ ಬಜಾಜ್ ಪಲ್ಸರ್ 150 ಬೈಕ್‌ಗಳಿಗೆ ಪ್ರತಿಸ್ಪರ್ಧೆ ಒಡ್ಡಲು ಸಜ್ಜಾಗುತ್ತಿದೆ.
150ಸಿಸಿ ಸೆಗ್ಮೆಂಟ್‌ನಲ್ಲಿ ಯೂನಿಕಾರ್ನ್ ಹಾಗೂ ಡಜ್ಲಾರ್ ನಿರೀಕ್ಷಿತ ಮಟ್ಟದಲ್ಲಿ ಯಶ ಸಾಧಿಸದಿರುವುದರಿಂದ ಹೋಂಡಾದಿಂದ ಇಂತಹದೊಂದು ಬೆಳವಣಿಗೆ ಕಂಡುಬರುತ್ತಿದೆ. ಅಂದರೆ ಸದ್ಯದಲ್ಲೇ ಹೋಂಡಾ ನೂತನ 150ಸಿಸಿ ಬೈಕ್ ದೇಶದ ರಸ್ತೆಗೆ ಅಪ್ಪಳಿಸಲಿದೆ.
ಅಂದ ಹಾಗೆ ಹೋಂಡಾ ವೆರ್ಜಾ 150 (Verza 150) ಈಗಾಗಲೇ ಇಂಡೋನೇಷ್ಯಾ ಮಾರುಕಟ್ಟೆಯನ್ನು ತಲುಪಿದೆ. ಪ್ರಸ್ತುತ ಆವೃತ್ತಿ ದೇಶದ ರಸ್ತೆಗೆ ಪ್ರವೇಶಿಸುವುದನ್ನು ಅಲ್ಲಗಳೆಯುವಂತಿಲ್ಲ. ಇನ್ನು ವೆರ್ಜಾ 150 ತಾಂತ್ರಿಕತೆಯತ್ತ ಗಮನ ಹಾಯಿಸಿದರೆ ಇದರ 150 ಸಿಸಿ ಎಂಜಿನ್ 12.7 ಎನ್‌ಎಂ ಟರ್ಕ್ಯೂನಲ್ಲಿ ಗರಿಷ್ಠ 13.2 ಪಿಎಸ್ ಪವರ್ ಉತ್ಪಾದಿಸಲಿದೆ. ಒಟ್ಟಿನಲ್ಲಿ ಹೋಂಡಾ ಹೊಸ ಅವತರಣಿಕೆಗಾಗಿ ಬೈಕ್ ಪ್ರಿಯರು ಕಾತರದಿಂದಿದ್ದಾರೆ.


Click it and Unblock the Notifications









