ಯುರೋಪ್ ಬ್ರಾಂಡ್ ಹಾರೆಕ್ಸ್‌ನಿಂದ ಕ್ಲಾಸಿಕ್ ಬೈಕ್
ವಿಶ್ವದ ಯಾವುದೇ ಮೋಟಾರ್ ಸೈಕಲ್ ಕಂಪನಿಯಾದರೂ ದ್ವಿಚಕ್ರ ವಾಹನ ಕುರಿತಾದ ಸುದ್ದಿಗಳನ್ನು ತಿಳಿದುಕೊಳ್ಳಲು ಭಾರತೀಯ ಗ್ರಾಹಕರು ಸದಾ ಉತ್ಸುಕರಾಗಿರುತ್ತಾರೆ. ಇದೇ ಕಾರಣಕ್ಕಾಗಿ ಇಂದಿನ ಈ ಲೇಖನದಲ್ಲಿ ನೀವು ಕೇಳಿರದ ಹಾರೆಕ್ಸ್ ಬ್ರಾಂಡ್ ಬಗ್ಗೆ ಹೇಳ ಬಯಸುತ್ತಿದ್ದೇವೆ.
ಹಾರೆಕ್ಸ್ ಜರ್ಮನಿಯ ಮೂಲದ ಅತಿ ಪುರಾತನ ಟು ವೀಲರ್ ವಾಹನ ತಯಾರಕ ಸಂಸ್ಥೆಯಾಗಿದೆ. 1920ನೇ ಇಸವಿಯಲ್ಲಿ ರೆಕ್ಸ್ ಗ್ಲಾಸ್‌ವೇರ್ ಕಂಪನಿಯು ಹಾರೆಕ್ಸ್ ಬೈಕ್ ಬ್ರಾಂಡನ್ನು ಸ್ಥಾಪಿಸಿತ್ತು. ಹೋಮ್‌ಬರ್ಗ್ ಹಾಗೂ ರೆಕ್ಸ್ ಹೆಸರುಗಳನ್ನು ಸಂಯೋಜಿಸಿ ಹಾರೆಕ್ಸ್ ಎಂಬ ಬ್ರಾಂಡ್ ಹೆಸರನ್ನು ರೂಪಿಸಲಾಗಿತ್ತು.
ಎರಡನೇ ಮಹಾಯುದ್ಧದ ಬಳಿಕ ಡೈಮ್ಲರ್ ಬೆಂಝ್ ಅಧೀನತೆಗೆ ಬಂದ ಹಾರೆಕ್ಸ್ ಕಂಪನಿಯ ಉತ್ಪಾದನೆಯು 1960ರಲ್ಲಿ ಸಂಪೂರ್ಣವಾಗಿ ನಿಲುಗಡೆಗೊಂಡಿತ್ತು. ಆ ಬಳಿಕ ನಡೆದ ಪೂರಕ ಬೆಳವಣಿಗೆ ಬಳಿಕ 2010ರಲ್ಲಿ ಅತ್ಯಂತ ಪವರ್‌ಫುಲ್ ಸಿಕ್ಸ್ ಸಿಲಿಂಡರ್ ಸೂಪರ್ ಚಾರ್ಜ್ಡ್ ಎಂಜಿನ್ ಹೊಂದಿರುವ ಹಾರೆಕ್ಸ್ ಮೋಟಾರ್ ಸೈಕಲ್ಸ್ ಮರು ಉತ್ಪಾದಿಸಲು ಕಂಪನಿ ನಿರ್ಧರಿಸಿತ್ತು.
2011ರ ವರ್ಷಾಂತ್ಯದಲ್ಲಿ ಜರ್ಮನಿ, ಆಸ್ಟ್ರೀಯಾ ಹಾಗೂ ಸ್ವಿಜರ್ಲೆಂಡ್ ಪ್ರವೇಶಿಸಿದ ಹಾರೆಕ್ಸ್ ಬೈಕ್‌ಗಳು ಆ ಬಳಿಕ ನಿಧಾನವಾಗಿ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿರಿಕೊಂಡಿತ್ತು. ಕಳೆದ ವರ್ಷ ಹಾರೆಕ್ಸ್‌ನಿಂದ ಬಿಡುಗಡೆಯಾದ ಏಕಮಾತ್ರ ಮಾಡೆಲ್ ಹಾರೆಕ್ಸ್ ವಿಆರ್6 ಆಗಿದೆ. ಕಂಪನಿಯು ಇದೀಗ ಕಡಿಮೆ ಎಂಜಿನ್ ಸಾಮರ್ಥ್ಯವುಳ್ಳ ವಿಆರ್6 ಕ್ಲಾಸಿಕ್ ಬೈಕನ್ನು ಅನಾವರಣಗೊಳಿಸಿದೆ.
1218ಸಿಸಿ ಮೋಟಾರು ಹೊಂದಿರುವ ವಿಆರ್6 ರೋಡ್ ಸ್ಟರ್ 161 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನೊಂದೆಡೆ ನೂತನ ವಿಆರ್6 ಕ್ಲಾಸಿಕ್ 6 ಸಿಲಿಂಡರ್ ಎಂಜಿನ್ ಹೊಂದಿದ್ದು 124 ಅಶ್ವಶಕ್ತಿ ಉತ್ಪಾದಿಸಲಿದೆ. ಅಂದ ಹಾಗೆ ಯುರೋಪ್ ಮಾರುಕಟ್ಟೆ ಪ್ರವೇಶಿಸಲಿರುವ ನೂತನ ಹಾರೆಕ್ಸ್ ವಿಆರ್6 ಕ್ಲಾಸಿಕ್ ದರ 24500 ಯುರೋ ಆಗಿದೆ. ಇದು ಭಾರತೀಯ ರುಪಾಯಿ ಮೌಲ್ಯಕ್ಕೆ ಪರಿವರ್ತಿಸಿದಾಗ ಸರಿ ಸುಮಾರು 21 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.


Click it and Unblock the Notifications










