50,000ಕ್ಕೂ ಹೆಚ್ಚು ಯಮಹಾ ರೇ ಸ್ಕೂಟರ್ ವಾಪಾಸ್
ದೇಶದ ಮುಂಚೂಣಿಯ ಸ್ಕೂಟರ್ ತಯಾರಕ ಸಂಸ್ಥೆಯಾದ ಇಂಡಿಯಾ ಯಮಹಾ ಮೋಟಾರ್, 50,000ಕ್ಕೂ ಹೆಚ್ಚು 'ರೇ' ಆವೃತ್ತಿಗಳನ್ನು ವಾಪಾಸ್ ಕರೆಯಿಸಿಕೊಳ್ಳಲು ನಿರ್ಧರಿಸಿದೆ. ಹ್ಯಾಂಡಲ್‌ಬಾರ್‌ನಲ್ಲಿ ಸಾಕಷ್ಟು ಶಕ್ತಿಯ ಕೊರತೆಯೇ ಯಮಹಾ ಇಷ್ಟೊಂದು ಹೆಚ್ಚು ಸಂಖ್ಯೆಯ ಸ್ಕೂಟರ್‌ಗಳ ವಾಪಸಾತಿಗೆ ಕಾರಣವಾಗಿದೆ.
ಅಸಮರ್ಪಕ ವೆಲ್ಡಿಂಗ್‌ನಿಂದಾಗಿ ಸಮಸ್ಯೆ ತಲೆದೋರಿದೆ. ಹಾಗಿದ್ದರೂ ಸ್ಕೂಟರ್‌ಗಳ ಉತ್ಪಾದನ ದಿನಾಂಕಗಳ ಮಾಹಿತಿ ನೀಡಲು ಕಂಪನಿ ನಿರಾಕರಿಸಿದೆ. ಬಲ್ಲ ಮೂಲಗಳ ಪ್ರಕಾರ 56,082ಕ್ಕೂ ಹೆಚ್ಚು ಸ್ಕೂಟರ್‌ಗಳ ರಿಕಾಲ್ ನಡೆಯುತ್ತಿದೆ.
ಪ್ರಸ್ತುತ ಸಮಸ್ಯೆಯು ಸ್ಟೀರಿಂಗ್ ಕಾರ್ಯಾಚರಣೆಗೆ ತೊಡಕುಂಟಾಗುವ ಸಂಭವವಿದೆ. ಈ ನಿಟ್ಟಿನಲ್ಲಿ ಸಮಸ್ಯೆ ಬಗೆಹರಿಸುವುದಕ್ಕಾಗಿ ಗ್ರಾಹಕರನ್ನು ವ್ಯಯಕ್ತಿಕವಾಗಿ ಸಂಪರ್ಕಿಸಲಾಗುತ್ತಿದೆ. ಈ ಪ್ರಕ್ರಿಯೆಗೆ ಗ್ರಾಹಕ ಹೆಚ್ಚುವರಿ ವೆಚ್ಚ ಭರಿಸಬೇಕೇದಿಲ್ಲ. ಹಾಗೆಯೇ ಸಂಪೂರ್ಣ ಪ್ರಕ್ರಿಯೆ ಉಚಿತವಾಗಿ ನಡೆಯಲಿದೆ.
'ರೇ ರಿಫ್ರೆಶ್ ಕಾಂಪೈನ್' ಕಾರ್ಯಕ್ರಮದ ಮುಖಾಂತರ ದೇಶದ್ಯಾಂತ ಸ್ಥಿತಗೊಂಡಿರುವ ಯಮಹಾ ಡೀಲರ್‌ಶಿಪ್‌ಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತಿದೆ. ಪ್ರಸ್ತುತ ಸಮಸ್ಯೆ ರೇ ಸ್ಕೂಟರ್‌ಗಳಲ್ಲಿ ಮಾತ್ರ ಕಂಡುಬಂದಿದೆ. ಇದರಲ್ಲಿ 'ರೇ ಝಡ್' ಆವೃತ್ತಿ ಒಳಪಟ್ಟಿಲ್ಲ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿದೆ.


Click it and Unblock the Notifications









