ಕವಾಸಕಿ ಝಡ್800 ಭಾರತ ಲಾಂಚ್‌ಗೆ ರೆಡಿ
ಇತ್ತೀಚೆಗಷ್ಟೇ ನಿಂಜಾ ಝಡ್‌ಎಕ್ಸ್-10ಆರ್ ಮತ್ತು ನಿಂಜಾ ಝಡ್‌ಎಕ್ಸ್-14ಆರ್ ಸೂಪರ್ ಬೈಕ್‌ಗಳನ್ನು ಪರಿಚಯಿಸಿದ್ದ ಕವಾಸಕಿ, ಭಾರತಕ್ಕೆ ಝಡ್1000 ಪವರ್‌ಫುಲ್ ಬೈಕ್ ಪರಿಚಯಿಸುವ ಯೋಜನೆಯಲ್ಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ
ಇದಕ್ಕೂ ಮೊದಲು ಝಡ್1000 ಆವೃತ್ತಿಯ ಸಣ್ಣ ರೂಪವಾಗಿರುವ ಝಡ್800 ಮಾರುಕಟ್ಟೆ ಪ್ರವೇಶಿಸಲಿದೆ. ಅಷ್ಟೇ ಯಾಕೆ ಪ್ರಸ್ತುತ ಬೈಕನ್ನು ಪುಣೆ ಶೋ ರೂಂನಲ್ಲಿ ಪ್ರದರ್ಶನಕ್ಕಿಟ್ಟಿದೆ.

ನೂತನ ಕವಾಸಕಿ ಝಡ್800 806 ಸಿಸಿ ಲಿಕ್ವಿಡ್ ಕೂಲ್ಡ್, ಫ್ಯೂಯಲ್ ಇಂಜೆಕ್ಟಡ್ ಇನ್ ಲೈನ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 113 ಪಿಎಸ್ ಪವರ್ (83 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ.
ಅಂದ ಹಾಗೆ ಝಡ್1000ಗೆ ಸಮಾನದ ವಿನ್ಯಾಸವನ್ನು ಝಡ್800 ಪಡೆದುಕೊಳ್ಳಲಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಇವೆರಡು ಬೈಕ್‌ಗಳು ವರ್ಷಾಂತ್ಯದಲ್ಲಿ ಅಥವಾ ವರ್ಷಾರಂಭದಲ್ಲಿ ಜತೆಯಾಗಿ ಲಾಂಚ್ ಆಗುವ ಸಂಭವವಿದೆ. ಸ್ಥಳೀಯವಾಗಿ ಜೋಡಣೆಯಾಗಲಿರುವ ಝಡ್800 ಬೈಕ್ 10 ಲಕ್ಷ ರು.ಗಳ ಬಜೆಟ್‌ನೊಳಗೆ ಆಗಮನವಾಗಲಿದೆ.


Click it and Unblock the Notifications








