ದೇಶದ ರಸ್ತೆಯಲ್ಲಿ ಸದ್ದು ಮಾಡಲಿರುವ ಕವಾಸಕಿ ಬೈಕ್
ಸದ್ಯದಲ್ಲೇ ಕವಾಸಕಿ ನೂತನ ಬೈಕ್‌ಗಳು ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲಿದೆ. ಮೂಲಗಳ ಪ್ರಕಾರ ಕವಾಸಕಿ ಝಡ್‌ಎಕ್ಸ್-10ಆರ್ ಮತ್ತು ಝಡ್‌ಎಕ್ಸ್-14ಆರ್ ಸೆಪ್ಟೆಂಬರ್ ತಿಂಗಳಲ್ಲಿ ದೇಶದಲ್ಲಿ ಲಾಂಚ್ ಆಗಲಿದೆ.
ಕವಾಸಕಿ ಝಡ್‌ಎಕ್ಸ್-10ಆರ್ ಎಕ್ಸ್ ಶೋ ರೂಂ ದರ 15 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಹಾಗೆಯೇ ಝಡ್‌ಎಕ್ಸ್-14ಆರ್ 17 ಲಕ್ಷ ರು.ಗಳಲ್ಲಿ ಲಭ್ಯವಿರಲಿದೆ.
ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ಕವಾಸಕಿ ಬೈಕ್‌ಗಳು ದೇಶದಲ್ಲಿ ಸಪ್ಲೇ ಆಗಲಿದೆ. ಈ ಮೂಲಕ ಟಾಪ್ ಎಂಡ್ ಬೈಕ್ ವೆರಿಯಂಟ್‌ಗಳಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ಗುರಿಯನ್ನು ಕವಾಸಕಿ ಹೊಂದಿದೆ.
ಬಜಾಜ್ ಜತೆ ಪಾಲುದಾರಿಕೆ ಹೊಂದಿರುವ ಕವಾಸಕಿ ದೇಶದ ಕ್ರೀಡಾ ಪ್ರಿಯ ಬೈಕ್ ಉತ್ಸಾಹಿಗಳನ್ನು ಗುರಿಯಿರಿಸಿಕೊಂಡಿದೆ. ಸೆಪ್ಟೆಂಬರ್ ತಿಂಗಳಲ್ಲಿ ಟ್ರಯಂಪ್ ಬೈಕ್ ಕೂಡಾ ಎಂಟ್ರಿ ಕೊಡುವ ಸಾಧ್ಯತೆಯಿದೆ. ಇದು ಮಾರುಕಟ್ಟೆಯಲ್ಲಿ ಹೆಚ್ಚಿನ ಪೈಪೋಟಿಗೆ ಕಾರಣವಾಗಲಿದೆ.
ನೂತನ ಕವಾಸಕಿ ನಿಂಜಾ ಝಡ್‌ಎಕ್ಸ್10ಆರ್ ಸೂಪರ್ ಸ್ಪೋರ್ಟ್ಸ್ ಬೈಕ್ 1 ಲೀಟರ್ 4 ಸಿಲಿಂಡರ್ ಎಂಜಿನ್ ಪಡೆಯಲಿದ್ದು, 194 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ. ಇದು ಗಂಟೆಗೆ 296 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನೊಂದೆಡೆ ಕವಾಸಕಿ ಝಡ್‌ಎಕ್ಸ್-14ಆರ್ 1.4 ಲೀಟರ್ ಫೋರ್ ಸ್ಟ್ರೋಕ್ ಎಂಜಿನ್ ಜತೆಗೆ 4 ಸಿಲಿಂಡರ್ ಪಡೆಯಲಿದೆ.


Click it and Unblock the Notifications









