ಇದೇ ತಿಂಗಳಲ್ಲಿ ಎಂಟ್ರಿ ಕೂಡಲಿದೆ ಕೆಟಿಎಂ ಸ್ಟೈಲಿಷ್ ಡ್ಯೂಕ್
ಪ್ರಸಕ್ತ ತಿಂಗಳಲ್ಲೇ ಕೆಟಿಎಂ ಡ್ಯೂಕ್ 390 ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿರುವ ಕ್ಯಾಲೆಂಡರ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಕೆಲವು ವಾರಗಳ ಹಿಂದೆ ಆಸ್ಟ್ರಿಯಾದಲ್ಲಿ ಡ್ಯೂಕ್ 390 ಅನಾವರಣಗೊಂಡಿತ್ತು. ಇದು ಡ್ಯೂಕ್ ಬಿಡುಗಡೆಗೆ ಮುನ್ನುಡಿ ಬರೆದಿತ್ತು.
ಕಳೆದ ವರ್ಷ ಮಿಲಾನ್‌ನಲ್ಲಿ ನಡೆದ ಎಐಸಿಎಂಎದಲ್ಲಿ ಡ್ಯೂಕ್ 390 ಪಾದಾರ್ಪಣೆಗೈದಿತ್ತು. ಡ್ಯೂಕ್ 390 ಬೈಕ್ 43 ಹಾರ್ಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ದೇಶದಲ್ಲಿ ಬಜಾಜ್‌ನಿಂದ ನಿರ್ಮಿತವಾಗಲಿರುವ ಕೆಟಿಎಂ ಡ್ಯೂಕ್ 390 ದರ 2 ಲಕ್ಷ ರು. ಅಂದಾಜಿಸಲಾಗಿದೆ. ಯಾವುದೇ ತರಹದ ಬೈಕ್ ಆದರೂ ದೇಶದಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಬಿಡುಗಡೆಯಾದ್ದಲ್ಲಿ ಮಾತ್ರ ಪೈಪೋಟಿ ನೀಡುವಲ್ಲಿ ಸಾಧ್ಯವಾಗಲಿದೆ.
ಒಟ್ಟಿನಲ್ಲಿ ಕೆಟಿಎಂಗೆ ದೇಶದಲ್ಲಿ ಹೇಗೆ ಮಾರುಕಟ್ಟೆ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂಬುದಕ್ಕೆ ಇನ್ನು ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.


Click it and Unblock the Notifications









