ರಿಕಾಲ್; ಕೆಟಿಎಂ ಡ್ಯೂಕ್‌ನಲ್ಲೂ ಸಮಸ್ಯೆ?
ಬಲ್ಲ ಮೂಲಗಳ ವರದಿಗಳ ಪ್ರಕಾರ ಇತ್ತೀಚೆಗಷ್ಟೇ ಲಾಂಚ್ ಮಾಡಲಾಗಿದ್ದ ಕೆಟಿಎಂ ಡ್ಯೂಕ್ 390 ಬೈಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡರ ಹಿನ್ನಲೆಯಲ್ಲಿ ವಾಪಾಸ್ ಪಡೆಯಲಾಗುತ್ತಿದೆ. ವಾಹನೋದ್ಯಮ ಮೂಲಗಳ ಪ್ರಕಾರ ಕೆಟಿಎಂ ಅನಧಿಕೃತವಾಗಿ 390 ಡ್ಯೂಕ್ ಬೈಕ್‌ಗಳನ್ನು ರಿಕಾಲ್ ಮಾಡುತ್ತಿವೆ.
ಹಾಗಿದ್ದರೂ ಕೆಟಿಎಂ ಡ್ಯೂಕ್ 390 ವಾಪಸಾತಿಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ. ಆದರೆ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಬಿಡಿಭಾಗಗಳನ್ನು ಬದಲಾಯಿಸಲಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಲಭಿಸಿದೆ.
ಅತ್ಯಧಿಕ ವಾಹನ ದಟ್ಟಣೆ ಪರಿಸ್ಥಿತಿಯಲ್ಲಿ ಎಂಜಿನ್ ಹೆಚ್ಚು ಬಿಸಿಗೊಳ್ಳುತ್ತಿರುವುದು ಸಹ ಸಮಸ್ಯೆಗೆ ಕಾರಣವಾಗಿದೆ. ಇವೆಲ್ಲ ಸಮಸ್ಯೆಗಳಿಗೆ ಸ್ಥಳೀಯ ಡೀಲರುಗಳ ಬಳಿ ಎರಡರಿಂದ ಮೂರು ತಾಸಿನೊಳಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ.
ಕೆಟಿಎಂ ಡ್ಯೂಕ್ 390 ಸಿಂಗಲ್ ಸಿಲಿಂಡರ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 43 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಬಜಾಜ್‌ನ ಚಕನ್ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.


Click it and Unblock the Notifications









