ಇನ್ನೊಂದು ಬಿಗ್ ಲಾಂಚ್; ಕೆಟಿಎಂ ಸೂಪರ್ ಡ್ಯೂಕ್

By Nagaraja

ವಾಹನ ಪ್ರಿಯರು ಇನ್ನೊಂದು ಬಿಗ್ ಲಾಂಚ್‌ಗೆ ಸಜ್ಜಾಗಿರಿ. ಜಗತ್ತಿನ ಮುಂಚೂಣಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿರುವ ಕೆಟಿಎಂ ಸದ್ಯದಲ್ಲೇ 1290 ಸೂಪರ್ ಡ್ಯೂಕ್ ಆರ್ ಬೈಕನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಈ ಸಂಬಂಧ ಈಗಾಗಲೇ ಟೀಸರ್ ಇಮೇಜ್ ಹಾಗೂ ವೀಡಿಯೊ ಲಾಂಚ್ ಮಾಡಲಾಗಿದ್ದು, ಬೈಕ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಈ ನಿಟ್ಟಿನಲ್ಲಿ 'http://www.1290superduker.com' ಎಂಬ ವಿಶೇಷ ವೆಬ್‌ಸೈಟ್ ತಾಣ ಕೂಡಾ ಸಿದ್ಧಪಡಿಸಿದೆ. ಇದರಲ್ಲಿ ಕೌಂಟ್ ಡೌನ್ ಸಮಯ ಕೂಡಾ ಆಳವಡಿಸಲಾಗಿದೆ.


ನೂತನ ಕೆಟಿಎಂ ಸೂಪರ್ ಡ್ಯೂಕ್ 1290 ಆರ್, ಅಕ್ಟೋಬರ್ 1ರಂದು ಬಿಡುಗಡೆಯಾಗಲಿದೆ. ಪ್ರಸ್ತುತ ರೇಸ್ ಟ್ರ್ಯಾಕ್‌ನಲ್ಲಿನ ಟೀಸರ್ ವೀಡಿಯೊ ಆಕರ್ಷಣೆಗೆ ಕಾರಣವಾಗಿದೆ. ನಿಮ್ಮ ಮಾಹಿತಿಗಾಗಿ, ಕಳೆದ ವರ್ಷ ನಡೆದ ಮಿಲಾನ್ ಮೋಟಾರ್ ಸೈಕಲ್ ಶೋದಲ್ಲಿ (ಇಐಸಿಎಂಎ 2012) ಮೊದಲ ಬಾರಿ ಪ್ರದರ್ಶನ ಕಂಡಿದ್ದ ಕೆಟಿಎಂ ಸೂಪರ್ ಡ್ಯೂಕ್ ಬೈಕ್ 1195ಸಿಸಿ ವಿ-ಟ್ವಿನ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 200 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ರೈಡ್ ಬೈ ವೈರ್, ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಕ್ರೋಮ್ ಮೊಲಿಡೆನಮ್ ಸ್ಟೀಲ್ ಟ್ಯೂಬುಲರ್ ಫ್ರೇಮ್, ಬ್ರೆಂಬೊ ಬ್ರೇಕ್ ಜೋಡಣೆ ಮತ್ತು ಹಗುರ ಅಲಾಯ್ ವೀಲುಗಳು ಇತರ ಪ್ರಮುಖ ಫೀಚರುಗಳಾಗಿವೆ.

ಪ್ರಸ್ತುತ ಕೆಟಿಎಂ ಸೂಪರ್ ಡ್ಯೂಕ್ ಭಾರತ ಮಾರುಕಟ್ಟೆ ಪ್ರವೇಶಿಸುವ ಬಗ್ಗೆ ಯಾವುದೇ ಅಧಿಕೃತ ಬಂದಿಲ್ಲ. ಆದರೆ ಭವಿಷ್ಯದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
<center><iframe width="100%" height="450" src="//www.youtube.com/embed/_6Fd8QMctR0" frameborder="0" allowfullscreen></iframe></center>

More from DriveSpark

Article Published On: Friday, September 20, 2013, 14:16 [IST]
English summary
The day have been waiting for since the 2012 EICMA is almost here. KTM has made live the Super Duke 1290 R launch webpage. The site, right now, displays a launch countdown clock. The clock will hit ZERO at the end of this month when the world will get its first look at ‘The Beast'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+