ರಾಜಸ್ತಾನ ರಾಯಲ್ಸ್ ಸಹ ಪ್ರಾಯೋಜಕತ್ವ ವಹಿಸಿದ ಮಹೀಂದ್ರ

Posted By:

ಇದೀಗ ಎಲ್ಲೆಡೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್ ಹಬ್ಬ. ಸಂಜೆಯಾದರೆ ಆಫೀಸ್, ಕಚೇರಿಗಳಿಂದ ಬೇಗನೇ ತೆರಳುವ ಸಿಬ್ಬಂದಿಗಳು ಟಿ.ವಿ ಮುಂದೆ ಕುಳಿತುಕೊಳ್ಳುತ್ತಾರೆ.

ಈ ಸಂದರ್ಭದಲ್ಲಿ ವಾಹನ ತಯಾರಕ ಕಂಪನಿಗಳು ಸಹ ತಮ್ಮ ಉತ್ಪನ್ನಗಳನ್ನು ಉತ್ತೇಜಿಸಲು ಅವಿರತ ಪ್ರಯತ್ನ ನಡೆಸುತ್ತಿದೆ. 2013 ಆವೃತ್ತಿಯ ಪೆಪ್ಸಿ ಐಪಿಎಲ್ ತಂಡಗಳ ಸಹ ಪ್ರಾಯೋಜಕತ್ವ ವಹಿಸುತ್ತಿರುವುದು ಇದರ ಪ್ರಮುಖ ತಂತ್ರವಾಗಿದೆ.

Mahindra, Rajasthan Royals Form Partnership

ಈಗಷ್ಟೇ ಮಾರುಕಟ್ಟೆಗೆ ಅಪ್ಪಳಿಸಿರುವ ಪ್ಯಾಂಥರೊ ಪ್ರಚಾರರ್ಥವಾಗಿ ಮಹೀಂದ್ರ ಟು ವೀಲರ್ ಕೂಡಾ ರಾಜಸ್ತಾನ ರಾಯಲ್ಸ್ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ತಂಡದ ಜತೆ ಒಪ್ಪಂದ ಮಾಡಿಕೊಂಡಿದೆ.

ಒಪ್ಪಂದ ಪ್ರಕಾರ ಆಟಗಾರರ ಪ್ಯಾಂಟ್‌ಗಳಲ್ಲಿ ಪ್ಯಾಂಥರೊ ಬ್ರಾಂಡ್‌ಗೆ ಪ್ರಚಾರ ಲಭಿಸಲಿದೆ. ಇದೇ ಸಂದರ್ಭದಲ್ಲಿ ಪ್ಯಾಂಥರೊ ಪ್ರಚಾರದಲ್ಲಿ ಆರ್ ಆರ್ ಲೊಗೊ, ಬ್ರಾಂಡ್ ಹೆಸರು ಆಟಗಾರರ ಚಿತ್ರಗಳನ್ನು ಬಳಕೆ ಮಾಡಬಹುದಾಗಿದೆ. ಈ ಮೂಲಕ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ದೇಶದಾದ್ಯಂತ ಪ್ಯಾಂಥರೊ ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಲಭ್ಯವಿದೆ. ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಂಡ ಎಂಟ್ರಿ ಲೆವೆಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 39,650 ರು.ಗಳಾಗಿವೆ.

English summary
Mahindra Two Wheelers has found a perfect opportunity to promote its new product, the Pantero motorcycle. The two wheeler manufacturer has signed a marketing deal with T20 cricket team Rajasthan Royals

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark