ರೆಡಿಯಾಗಿರಿ; ಟ್ರಯಂಪ್ ಬೈಕ್ ಭಾರತಕ್ಕೆ ಬರುವುದು ಖಚಿತ
ಬ್ರಿಟನ್ ಮೂಲದ ದ್ವಿಚಕ್ರ ವಾಹನ ಉತ್ಪಾದಕ ಸಂಸ್ಥೆಯಾದ ಟ್ರಯಂಪ್ ಮೋಟಾರ್‌ಸೈಕಲ್ಸ್, ಭಾರತಕ್ಕೆ ನೂತನ ಬೈಕ್ ಪರಿಚಯಿಸುವುದು ಖಚಿತವಾಗಿಬಿಟ್ಟಿದೆ. ಇದರಿಂದ ಗ್ರಾಹಕರ ಉತ್ಸಾಹ ಇಮ್ಮಡಿಯಾಗಿದ್ದು, 2013ನೇ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಟ್ರಯಂಪ್ ಭಾರತ ರಸ್ತೆ ಪ್ರವೇಶಿಸುವ ನಿರೀಕ್ಷೆಯಿದೆ.
ಈ ಹಿಂದೆ 2012 ದೆಹಲಿ ಆಟೋ ಎಕ್ಸ್‌ಪೋದಲ್ಲಿ ಟ್ರಯಂಪ್ ಮೋಟಾರ್‌ಸೈಕಲ್ ದೇಶದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿತ್ತು. ಇದೀಗ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಗೆ ನೂತನ ಬೈಕ್ ಪರಿಚಯಿಸುವುದಾಗಿ ತಿಳಿಸಿದೆ.
ಟ್ರಯಂಪ್ ವೆರಿಯಂಟ್ ಹಾಗೂ ದರ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
Bonneville: 5,50,000 ರು.
Street Triple: 5,75,000 ರು.
Daytona 675: 7,00,000 ರು.
Speed Triple: 8,00,000 ರು.
Tiger 800XC: 11,40,000 ರು.
Storm: 17,00,000 ರು.
Rocket III Roadster: 22,00,000 ರು.
ವಿ.ಸೂ: ಇದು ಒಂದು ವರ್ಷದ ಹಿಂದೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಗೊಳಿಸಲಾದ ದರ ಮಾಹಿತಿಯಾಗಿದೆ. ಹಾಗಾಗಿ ಈ ಎಲ್ಲ ರೇಂಜ್‌ಗಳ ಬೈಕಿಗೆ ಸಮಾನ ದರಗಳನ್ನು ಲಗತ್ತಿಸಲಾಗುತ್ತಿದೆಯೇ ಎಂಬುದು ತಿಳಿದು ಬಂದಿಲ್ಲ. ಹಾಗಿದ್ದರೂ ಟ್ರಯಂಪ್ ಬೈಕ್‌ಗಳ ಪ್ರಾರಂಭಿಕ ದರ ಐದು ಲಕ್ಷ ರು.ಗಳ ಮೇಲ್ಪಟ್ಟಿರಲಿದೆ. ಈ ಮೂಲಕ ಹರ್ಲಿ ಡೇವಿಡ್ಸನ್‌ಗಳಂತಹ ಬೈಕ್‌ಗಳಿಗೆ ಕಠಿಣ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆ.

ಟ್ರಯಂಪ್ ಮೋಟಾರ್‌ಸೈಕಲ್ಸ್
ಮುಂದಿನ ಪುಟ ತಿರುವುತ್ತಾ ಟ್ರಯಂಪ್‌ನ ಆಕರ್ಷಕ ಬೈಕ್‌ಗಳನ್ನು ಆನಂದಿಸಿರಿ.

Bonneville

Bonneville

Daytona 675

Daytona 675

Rocket III Roadster

Rocket III Roadster

Speed Triple

Speed Triple

Storm

Storm

Street Triple

Street Triple

Tiger 800XC



Click it and Unblock the Notifications








