ಟ್ರಯಂಪ್ ಮೊದಲ ಡೀಲರ್‌ಶಿಪ್ ಬೆಂಗಳೂರಿನಲ್ಲಿ
ನಿರೀಕ್ಷೆಯಂತೆಯೇ ಬ್ರಿಟನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಟ್ರಯಂಪ್ ಮೋಟಾರ್ ಸೈಕಲ್ಸ್ ಇಂಡಿಯಾ, ಬೆಂಗಳೂರಿನಲ್ಲಿ ತನ್ನ ಮೊದಲ ಡೀಲರ್‌ಶಿಪ್ ತೆರೆದುಕೊಳ್ಳಲಿದೆ.
ವಾಹನೋದ್ಯಮದ ಕ್ಷಣ ಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ಟ್ರಯಂಪ್‌ನ ಮೊದಲ ಡೀಲರ್‌ಶಿಪ್ ನವೆಂಬರ್ 28ರಂದು ಉದ್ಘಾಟನೆಯಾಗಲಿದೆ. ಈ ಎಲ್ಲ ಬೆಳವಣಿಗೆಗಳು ಬೆಂಗಳೂರು ಬೈಕ್ ಪ್ರೇಮಿಗಳ ಪಾಲಿಗೆ ಶುಭವೆನಿಸಿದೆ.

ಟ್ರಯಂಪ್‌ನಿಂದ ಆಗಮನವಾಗಲಿರುವ ಬೈಕ್‌ಗಳು
- ಬೊನೆವಿಲೆ,
- ಸ್ಟ್ರೀಟ್ ಟ್ರಿಪಲ್,
- ಸ್ಪೀಡ್ ಟ್ರಿಪಲ್,
- ಡೇಟೋನಾ 675,
- ಟೈಗರ್ 800 ಎಕ್ಸ್‌ಸಿ,
- ಥಂಡರ್‌ಬರ್ಡ್ ಸ್ಟ್ರೋಮ್,
- ರಾಕೆಟ್ III
ಇವೆಲ್ಲದರ ಮೂಲಕ ಟ್ರಯಂಪ್ ದೇಶದ ಪ್ರೀಮಿಯಂ ಬೈಕ್ ಸೆಗ್ಮೆಂಟ್‌ನಲ್ಲಿ ತನ್ನದೇ ಆದ ಸ್ಥಾನಮಾನ ರೂಪಿಸಿಕೊಳ್ಳುವ ದಿಟ್ಟ ಹೆಜ್ಜೆಯನ್ನಿಟ್ಟಿದೆ.
ಬೆಂಗಳೂರು ಬಳಿಕ ಹೈದರಾಬಾದ್, ಮುಂಬೈ ಹಾಗೂ ದೆಹಲಿಯಲ್ಲಿ ಡೀಲರ್‌ಶಿಪ್ ತೆರೆದುಕೊಳ್ಳಲಿದೆ.
ಅಂದ ಹಾಗೆ ಟ್ರಯಂಪ್ ಬೈಕ್‌ಗಳು ಐದು ಲಕ್ಷಕ್ಕಿಂತಲೂ ಹೆಚ್ಚು ದುಬಾರಿಯಾಗುವ ಸಾಧ್ಯತೆಯಿದೆ. ಟ್ರಯಂಪ್ ಘಟಕ ಬೆಂಗಳೂರಿನ ನರಸಾಪುರದಲ್ಲಿ ಸ್ಥಿತಗೊಂಡಿದೆ.


Click it and Unblock the Notifications








