ವೇತನ ಪರಿಷ್ಕರಣೆ; ಬಗೆಹರಿಯದ ಬಜಾಜ್ ಸಮಸ್ಯೆ

By Nagaraja

ವೇತನ ಪರಿಷ್ಕರಣೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಮುಂದಿರಿಸಿ ಬಜಾಜ್ ಆಟೋ ಕಾರ್ಮಿಕರು ನಡೆಸುತ್ತಿರುವ ಮುಷ್ಕರವು 12ನೇ ದಿನಕ್ಕೆ ಕಾಲಿರಿಸಿದ್ದು, ಇದುವರೆಗೆ ಸಮಸ್ಯೆ ಇತ್ಯರ್ಥಗೊಂಡಿಲ್ಲ.

ಕಾರ್ಮಿಕರು ಮುಷ್ಕರ ಕೈಬಿಡದ ಹೊರತಾಗಿ ಮಾತುಕತೆ ಅಸಾಧ್ಯ ಎಂದು ಬಜಾಜ್ ಆಟೋ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ ಈ ಸಂಬಂಧ ಪುಣೆ ಕೈಗಾರಿಕಾ ನ್ಯಾಯಾಲದಲ್ಲಿ ದಾವೆ ಹೂಡಿದೆ.

ಮತ್ತೊಂದೆಡೆ ಕಾರ್ಮಿಕರ ಮುಷ್ಕರ ತೀವ್ರತೆ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆಯುತ್ತಿದ್ದು, ಪುಣೆಯ ಚಕನ್ ಸೇರಿದಂತೆ ಪಿಂಪ್ರಿ ಚಿನ್ಚಾಂದ್ ಘಟಕದಲ್ಲಿ ಉತ್ಪಾದನೆ ಸಂಪೂರ್ಣ ಸ್ಥಗಿತಗೊಳಿಸುವುದಾಗಿ ಪುಣೆ ಕಾರ್ಮಿಕ ಒಕ್ಕೂಟ ಎಚ್ಚರಿಕೆ ನೀಡಿದೆ.

ಈ ನಡುವೆ ಬಜಾಜ್ ಆಟೋ ಚಕನ್ ಘಟಕದ ಉತ್ಪಾದನೆಯನ್ನು ಔರಾಂಗಬಾದ್‌ಗೆ ಸ್ಥಳಾಂತರಿಸಲಾಗಿದೆ. ಒಟ್ಟಾರೆಯಾಗಿ ಪ್ರಸ್ತುತ ಬೆಳವಣಿಗೆಯು ಆಟೋ ಜಗತ್ತಿಗೆ ಕೆಡುಕಾಗಿ ಪರಿಣಮಿಸಿದೆ.

ಬಜಾಜ್ ಆಟೋ ಚಕನ್ ಘಟಕದಲ್ಲಿ ಕೆಲಸ ಮಾಡುತ್ತಿರುವ 1500ರಷ್ಟು ಕಾರ್ಮಿಕರು ವೇತನ ಪರಿಷ್ಕರಣೆ ಸಂಬಂಧ ಜೂನ್ 25ರಿಂದ ಮುಷ್ಕರ ಆರಂಭಿಸಿದ್ದರು. ಪಲ್ಸರ್ ಸೇರಿದಂತೆ ಕೆಟಿಎಂ ಡ್ಯೂಕ್ ಹಾಗೂ ಅವೆಂಜರ್ ಮಾಡೆಲ್‌ಗಳು ಚಕನ್ ಘಟಕದಲ್ಲಿ ಉತ್ಪಾದನೆಯಾಗುತ್ತಿದೆ.

More from DriveSpark

Article Published On: Saturday, July 6, 2013, 13:08 [IST]
English summary
Demanding an immediate resolution to the 12-day-old agitation by the Chakan plant employees of Bajaj Auto, an umbrella organisation of trade unions has threatened mass stoppage of work in the Chakan and nearby Pimpri-Chinchwad industrial belt.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+