ಭಾರತದಲ್ಲಿ ಯಮಹಾ ಜಾಗತಿಕ ಮಾಡೆಲ್ ತಯಾರಿ

By Nagaraja

ಜಪಾನ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಯಮಹಾ, ಜಾಗತಿಕವಾಗಿ 'ಮೇಡ್ ಇನ್ ಇಂಡಿಯಾ' ಬೈಕ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಪ್ರಸ್ತುತ ಜಾಗತಿಕ ಮಾಡೆಲ್‌ಗಳನ್ನು ಭಾರತದಲ್ಲಿ ತಯಾರಿಸುವ ಯೋಜನೆ ಹೊಂದಿರುವ ಯಮಹಾ, ಯುರೋಪ್ ಖಂಡ ಸೇರಿದಂತೆ ಬೆಳೆದು ಬರುತ್ತಿರುವ ರಾಷ್ಟ್ರಗಳಲ್ಲಿ ಮಾರಾಟ ಕುದುರಿಸಿಕೊಳ್ಳುವ ಇರಾದೆ ಹೊಂದಿದೆ.

ಭಾರತವು ಅತ್ಯಂತ ಕಡಿಮೆ ವೆಚ್ಚದ ಮಾರುಕಟ್ಟೆಯನ್ನು ಹೊಂದಿದೆ. ಆದರೆ ಕೇವಲ ಅದನ್ನು ಮಾತ್ರ ಅವಲಂಬಿಸಿಲ್ಲ. ಬದಲಾಗಿ ಸ್ಟೈಲಿಷ್ ಹಾಗೂ ಕ್ರೀಡಾ ಬೈಕ್‌ಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತಿದ್ದು, ಇದು ಯುರೋಪ್ ಸೇರಿದಂತೆ ಏಷ್ಯಾ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ ಎಂದು ಯಮಹಾ ತಿಳಿಸಿದೆ.


ಭಾರತವನ್ನು 100ಸಿಸಿಯಿಂದ ಪ್ರಾರಂಭವಾಗಿ 200ಸಿಸಿ ವರೆಗಿನ ಪ್ರಯಾಣಿಕ ಬೈಕ್‌ಗಳ ಅಭಿವೃದ್ಧಿ ಹಾಗೂ ಉತ್ಪಾದಕ ರಾಷ್ಟ್ರವನ್ನಾಗಿ ಬದಲಾಯಿಸುವ ಗುರಿ ಯಮಹಾ ಹೊಂದಿರುವುದಾಗಿ ಕಂಪನಿ ತಿಳಿಸಿದೆ.

90ರ ದಶಕದಲ್ಲಿ ಹೆಚ್ಚು ಜನಪ್ರಿಯವೆನಿಸಿದ್ದ ಯಮಹಾ ದ್ವಿಚಕ್ರ ಪ್ರಯಾಣಿಕ ಸೆಗ್ಮೆಂಟ್, ಹೀರೊ, ಹೋಂಡಾ, ಬಜಾಜ್ ಹಾಗೂ ಟಿವಿಎಸ್ ಆಗಮನದ ಬಳಿಕ ನಿಧಾನವಾಗಿ ತನ್ನ ಪ್ರಾಬಲ್ಯವನ್ನು ಕಳೆದುಕೊಂಡಿತ್ತು. ಇದೀಗ ಹೊಸ ಮಾಡೆಲ್‌ಗಳನ್ನು ಲಾಂಚ್ ಮಾಡುವ ಮುಖಾಂತರ ಮಗದೊಮ್ಮೆ ನೆಚ್ಚಿನ ಬ್ರಾಂಡ್ ಎನಿಸಿಕೊಳ್ಳುವ ಗುರಿಯನ್ನಿರಿಸಿಕೊಂಡಿದೆ.

More from DriveSpark

Article Published On: Friday, August 30, 2013, 13:51 [IST]
English summary
Japanese bike major Yamaha plans to take the made-in-India brand global.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+