ದೇಶದಲ್ಲಿ ಮುಂದುವರಿದ ಯಮಹಾ ಅಬ್ಬರ

By Nagaraja

ನವೆಂಬರ್ ತಿಂಗಳ ಮಾರಾಟದಲ್ಲೂ ಯಮಹಾ ಮೋಟಾರ್ ಇಂಡಿಯಾ ಸೇಲ್ಸ್ ಪ್ರೈವೇಟ್ ಲಿಮಿಟೆಡ್ ಶೇಕಡಾ 28ರಷ್ಟು ವೃದ್ಧಿ ದಾಖಲಿಸಿದೆ. ಈ ಪೈಕಿ ದೇಶಿಯ ಮಾರಾಟವು ಶೇಕಡಾ 8ರಷ್ಟು ಏರಿಕೆಯಾಗಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಯಮಹಾ ರೇ ಹಾಗೂ ರೇ ಝಡ್ ಸ್ಕೂಟರ್ ಆವೃತ್ತಿಗಳು ಮಾರಾಟ ಹೆಚ್ಚಾಗುವಲ್ಲಿ ದೊಡ್ಡ ಪಾತ್ರ ವಹಿಸಿದೆ. ಈ ಮೂಲಕ ಕಳೆದ 11 ತಿಂಗಳಲ್ಲಿ ಒಟ್ಟಾರೆಯಾಗಿ ಶೇಕಡಾ 34ರಷ್ಟು ವೃದ್ಧಿ ದಾಖಲಿಸಿದೆ.

Yamaha

2013 ನವೆಂಬರ್ ತಿಂಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಯಮಹಾ 39,777 ಯುನಿಟ್ ಮಾರಾಟ ದಾಖಲಿಸಿದೆ. ಕಳೆದ ಬಾರಿಯಿದು 37,344 ಯುನಿಟ್‌ಗಳಾಗಿದ್ದವು. ಈ ಮೂಲಕ ಶೇಕಡಾ 7ರಷ್ಟು ಏರಿಕೆ ಕಂಡಿದೆ. ಇನ್ನೊಂದೆಡೆ ರಫ್ತು ವಹಿವಾಟಿನಲ್ಲಿ 17,383 ಸೇಲ್ಸ್ ದಾಖಲಿಸಿರುವ ಯಮಹಾ ಶೇಕಡಾ 137ರಷ್ಟು ಭರ್ಜರಿ ಏರುಗತಿ ಕಂಡಿದೆ. ಕಳೆದ ಬಾರಿಯಿದು 7,344 ಯುನಿಟ್‌ಗಳಿಗಷ್ಟೇ ಸೀಮಿತಗೊಂಡಿತ್ತು.

ಒಟ್ಟಿನಲ್ಲಿ ನವೆಂಬರ್ ತಿಂಗಳಲ್ಲಿ 57,160 ಯುನಿಟ್ ಮಾರಾಟ ದಾಖಲಿಸಿಕೊಂಡಿರುವ ಯಮಹಾ ಶೇಕಡಾ 28ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 44,688 ಯುನಿಟ್ ಮಾತ್ರ ಸೇಲಾಗಿದ್ದವು. ಈ ಮೂಲಕ ಶೇಕಡಾ 28ರಷ್ಟು ವೃದ್ಧಿ ಕಂಡಿದೆ.

More from DriveSpark

Article Published On: Friday, December 6, 2013, 12:04 [IST]
English summary
Continuing on its quest to witness high sales growth, Yamaha Motor India Sales Pvt. Ltd. has registered a growth of 7% in domestic sales during November 2013 as compared to the corresponding period last year. Yamaha’s successful entry into the scooter segment with the launch of Ray and Ray Z has been instrumental in boosting its sales to an all new level. Yamaha’s initiatives like BRO's Cricket League have also garnered newer levels of customer engagement. The company has been able to achieve a 34% average growth rate in the past 11 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+