ಡುಕಾಟಿ ಡಯಾವೆಲ್ ಪವರ್ ಕ್ರೂಸರ್; ಒಂದು ಕೈ ನೋಡ್ತೀರಾ?
2014 ಡುಕಾಟಿ ಡಯಾವೆಲ್ ಬರಿ ಕ್ರೂಸರ್ ಬೈಕ್ ಎಂದೆನಿಸಿಕೊಳ್ಳುವುದಿಲ್ಲ. ಬದಲಾಗಿ ಇಂದೊಂದು ಪವರ್ ಕ್ರೂಸರ್ ಆಗಿರಲಿದೆ. ಇದು ಸೂಪರ್ ಬೈಕ್ ಎಂಜಿನ್ ಸಾಮರ್ಥ್ಯ ಹೊಂದಿರಲಿದ್ದು, ಸ್ಪೋರ್ಟ್ಸ್ ಬೈಕ್ ವೈಶಿಷ್ಟ್ಯಗಳನ್ನು ಸಹ ಪಡೆದುಕೊಳ್ಳಲಿದೆ.
ಇತ್ತೀಚೆಗಷ್ಟೇ ಆಯೋಜನೆಯಾಗಿದ್ದ ಪ್ರತಿಷ್ಠಿತ 2014 ಜಿನೆವಾ ಮೋಟಾರು ಶೋದಲ್ಲಿ ಡುಕಾಟಿ ನೂತನ ಬೈಕ್ ಅನಾವರಣಗೊಂಡಿತ್ತು. ಮುಂದಿನ ಕೆಲವೇ ವಾರಗಳಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ರಸ್ತೆ ಪ್ರವೇಶಿಸಲಿರುವ ಡಯಾವೆಲ್ 20,000 ಅಮೆರಿಕನ್ ಡಾಲರುಗಳಷ್ಟು (13 ಲಕ್ಷ ರು.) ದುಬಾರಿಯೆನಿಸಲಿದೆ.

ಹಿಂದಿನ ಜನಾಂಗದ ಡಯಾವೆಲ್‌ಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸವನ್ನು 2014 ಡುಕಾಟಿ ಡಯಾವೆಲ್‌ಗೆ ಕೊಡಲಾಗಿದೆ. ಇದು ನೂತನ ಪೂರ್ಣ ಎಲ್‌ಇಡಿ ಹೆಡ್ ಲ್ಯಾಂಪ್ ಪಡೆದುಕೊಂಡಿದೆ.

2014 ಡುಕಾಟಿ ಡಯಾವೆಲ್, ಟೆಸ್ಟಾಸ್ಟ್ರೆಟ್ಟಾ 11 ಡಿಗ್ರಿ ಡಿಎಸ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 162 ಅಶ್ವಶಕ್ತಿ (130 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ನೂ ಡಯಾವೆಲ್‌ನಲ್ಲಿ 'ಡ್ಯುಯಲ್ ಸ್ಪಾರ್ಕ್' ಹಿಂದಿನ ಜನರೇಷನ್‌ನಲ್ಲಿರುವುದಕ್ಕೆ ಸಮಾನವಾದ ಪವರ್ ಅನ್ನು ವಿತರಿಸುತ್ತದೆ. ಇದು ಹಿಂದಿನ ಆವೃತ್ತಿಗಿಂತಲೂ ಹಗುರ ಭಾರವಾಗಿರಲಿದೆ.

ಅಂತೆಯೇ ಡುಕಾಟಿ ಪವರ್ ಕ್ರೂಸರ್ ಡಯಾವೆಲ್ ಬೈಕ್‌ನ ಎಕ್ಸಾಸ್ಟ್ ಕೂಡಾ ಪರಿಷ್ಕೃತಗೊಂಡಿದ್ದು, ಡ್ಯುಯಲ್ ಸಿಸ್ಟಂ ಪಡದುಕೊಂಡಿದೆ.

ನೀವು ಈಗಾಗಲೇ ಗಮನಿಸಿರುವಂತೆಯೇ ಮೂರು ವಿಭಿನ್ನ ಕಲರ್ ವೆರಿಯಂಟ್‌ಗಳಲ್ಲಿ 2014 ಡುಕಾಟಿ ಡಯಾವೆಲ್ ಲಭ್ಯವಾಗಲಿದೆ.


Click it and Unblock the Notifications