ಇಂಡೋನೇಷ್ಯಾದಲ್ಲಿ 2014 ಯಮಹಾ ಎಂ ಅನಾವರಣ
ಪ್ರಸ್ತುತ ಭಾರತ ಮಾರುಕಟ್ಟೆಯಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ವಾಹನ ತಯಾರಕ ಸಂಸ್ಥೆಗಳಲ್ಲಿ ಯಮಹಾ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ದೇಶದ ವಾಹನ ಮಾರುಕಟ್ಟೆ ಯಮಹಾದಿಂದ ಆಗಮನವಾಗುವ ಪ್ರತಿಯೊಂದು ಉತ್ಪನ್ನವನ್ನು ಅತ್ಯಂತ ನಿಕಟವಾಗಿ ಗಮನಿಸುತ್ತಿದೆ.
ಇನ್ನೊಂದೆಡೆ ಇಂಡೋನೇಷ್ಯಾದಲ್ಲಿ ಬಿಡುಗಡೆಯಾಗುವ ಬಹುತೇಕ ಉತ್ಪನ್ನಗಳು ನಿಧಾನವಾಗಿ ಭಾರತ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಅಂತೆಯೇ ಇಂಡೋನೇಷ್ಯಾದಲ್ಲಿ ಅನಾವರಣಗೊಂಡಿರುವ 2014 ಯಮಹಾ ವೈಝಡ್‌ಆರ್-ಎಂ1 ದೇಶದ ಬೈಕ್ ಪ್ರೇಮಿಗಳಲ್ಲೂ ತೀವ್ರ ಕುತೂಹಲ ಮೂಡಿಸಿದೆ.

ಇದು ಯಮಹಾ ಪಾಲಿಗೆ ಮಹತ್ವದೆನಿಸಿತ್ತು. ಯಾಕೆಂದರೆ ಇದೇ ಸಂದರ್ಭದಲ್ಲಿ ಮುಂಬರುವ ಮೊಟೊಜಿಪಿ ಆವೃತ್ತಿಯಲ್ಲಿ ಭಾಗವಹಿಸಲಿರುವ ಯಮಹಾ ಫಾಕ್ಟರಿ ರೇಸಿಂಗ್ ರೈಡರ್ಸ್ ತಂಡದ ಚಾಲಕರಾದ ಜಾರ್ಜ್ ಲಾರೆನ್ಜೊ ಮತ್ತು ವ್ಯಾಲೆಂಟಿನೊ ರೊಸ್ಸಿ ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಯಮಹಾ ಮುಂಬರುವ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳಲು ಇನ್ನಷ್ಟು ಹೆಚ್ಚು ಸಜ್ಜಾಗಿರುವುದಕ್ಕೆ ಇದೊಂದು ನಿದರ್ಶನ ಮಾತ್ರವಾಗಿದೆ.


Click it and Unblock the Notifications