ಕ್ರೀಡಾ ಬೈಕ್‌ಗಳತ್ತ ಗಮನ ಕೇಂದ್ರಿತವಾದ ಹೋಂಡಾ
ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲಿ ಕ್ರೀಡಾ ಬೈಕ್‌ಗಳು ಪ್ರಮುಖ ಆಕರ್ಷಣೆಯಾಗಿರಲಿದೆ. ಈ ಪೈಕಿ ದೇಶದ ಎರಡನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಮೋಟಾರುಸೈಕಲ್ ಮತ್ತು ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸ್ಪೋರ್ಟ್ಸ್ ಬೈಕ್‌ಗಳನ್ನು ಅನಾವರಣಗೊಳಿಸಲಿದೆ.
ಇದರಲ್ಲಿ ಎಂಟ್ರಿ ಲೆವೆಲ್ ಸಿಬಿಆರ್500ಆರ್ ಸೇರಿಕೊಳ್ಳಲಿದೆ. ಜಾಗತಿಕ ಅನಾವರಣದ ಅಂಗವಾಗಿ ಹೋಂಡಾ ದೆಹಲಿ ಆಟೋ ಎಕ್ಸ್ ಪೋವನ್ನು ಬಹಳ ಕುತೂಹಲದಿಂದ ಎದುರು ನೋಡುತ್ತಿದೆ.

ಇದು ಸಂಸ್ಥೆಯ ಭವಿಷ್ಯದ ಯೋಜನೆಗಳನ್ನು ಪ್ರಸ್ತುತಪಡಿಸಲಿದೆ. ಕೇವಲ ಸಿಬಿಆರ್500ಆರ್ ಅಷ್ಟೇ ಅಲ್ಲ. ಇಲ್ಲಿ ಸಿಬಿಆರ್ 650ಎಫ್, 650ಸಿಸಿ ಸ್ಪೋರ್ಟ್ಸ್ ಬೈಕ್, ಪಿಎಸ್‌ಎಕ್ಸ್125 ಸ್ಕೂಟರ್ ಕೂಡಾ ಪ್ರದರ್ಶನಗೊಳ್ಳಲಿದೆ.
2014 ಇಂಡಿಯಾ ಆಟೋ ಎಕ್ಸ್ ಪೋ ಫೆಬ್ರವರಿ 5ರಿಂದ 11ರ ವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಆರ್‌ಸಿ213ವಿ ಮಾದರಿ ಕೂಡಾ ಅನಾವರಣಗೊಳ್ಳಲಿದೆ.


Click it and Unblock the Notifications








