ಕುಸಿತದತ್ತ ಮುಖ ಮಾಡಿತೇ ಬಜಾಜ್ ಬೈಕ್ಸ್?
ಒಂದೆಡೆ ಮಹೀಂದ್ರ ಬೈಕ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದರೆ ಇನ್ನೊಂದೆಡೆ ಬಜಾಜ್ ಆಟೋ ಕುಸಿತದತ್ತ ಮುಖ ಮಾಡುತ್ತಿದೆ. ಹೌದು, ಡಿಸೆಂಬರ್ ತಿಂಗಳ ಮಾರಾಟದಲ್ಲಿ ಬಜಾಜ್ ಆಟೋ ಶೇಕಡಾ 12.63ರಷ್ಟು ಕುಸಿತ ಅನುಭವಿಸಿದೆ. ಈ ಅವಧಿಯಲ್ಲಿ 2,60,645 ಯುನಿಟ್‌ಗಳಷ್ಟೇ ಮಾರಾಟ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
2012ನೇ ಸಾಲಿನ ಇದೇ ಅವಧಿಯಲ್ಲಿ ಸಂಸ್ಥೆಯು 2,98,350 ಯುನಿಟ್ ಮಾರಾಟ ಸಾಧಿಸಿತ್ತು ಎಂದು ಬಜಾಜ್ ಆಟೋ ಲಿಮಿಟೆಡ್ (ಬಿಎಎಲ್) ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಗಿದ್ದರೂ ರಫ್ತು ವಹಿವಾಟಿನಲ್ಲಿ ಏರಿಕೆ ಸಾಧಿಸುವಲ್ಲಿ ಬಜಾಜ್ ಯಶಸ್ವಿಯಾಗಿದೆ. ಡಿಸೆಂಬರ್‌ನಲ್ಲಿ 1,50,753 ಯುನಿಟ್ ಸೇಲ್ಸ್ ಸಾಧಿಸಿರುವ ಬಜಾಜ್ ಶೇಕಡಾ 19.63ರಷ್ಟು ವೃದ್ಧಿ ದಾಖಲಿಸಿದೆ. ಕಳೆದ ಬಾರಿಯಿದು 1,26,016 ಯುನಿಟ್‌ಗಳಾಗಿದ್ದವು.
ಇನ್ನು ವಾಣಿಜ್ಯ ವಾಹನ ಮಾರಾಟ ವಿಭಾಗದಲ್ಲಿ ಬಜಾಜ್ ಶೇಕಡಾ 18.47ರಷ್ಟು ಇಳಿಕೆ ಕಂಡಿದೆ. ಕಳೆದ ಬಾರಿ 45,596ರಷ್ಟಿದ್ದ ಮಾರಾಟವು 37,171 ಯುನಿಟ್‌ಗಳಿಗೆ ಕುಸಿದಿದೆ. ಈ ಮೂಲಕ ಒಟ್ಟಾರೆ ಮಾರಾಟವು ಶೇಕಡಾ 13.42ರಷ್ಟು ಕುಸಿತ ಕಂಡಿದೆ. ಈ ಅವಧಿಯಲ್ಲಿ 2,97,776 ಯುನಿಟ್ ಮಾರಾಟ ದಾಖಲಿಸಿದ್ದರೆ ಕಳೆದ ವರ್ಷವಿದು 3,43,946 ಯುನಿಟ್‌ಗಳಾಗಿದ್ದವು.


Click it and Unblock the Notifications








