ಡುಕಾಟಿಯಿಂದ ಫೋಕ್ಸ್‌ವ್ಯಾಗನ್ ತಂತ್ರಜ್ಞಾನ ಆಮದು
ಇಟಲಿಯ ಸೂಪರ್ ಬೈಕ್ ತಯಾರಿಕ ಸಂಸ್ಥೆಯಾಗಿರುವ ಡುಕಾಟಿ, ಯುರೋಪ್ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಜರ್ಮನಿ ಮೂಲದ ಫೋಕ್ಸ್‌ವ್ಯಾಗನ್‌ನಿಂದ ನೂತನ ತಂತ್ರಜ್ಞಾನ ಆಮದು ಮಾಡಿಕೊಂಡಿದೆ.
ಡೆಸ್ಮೊಡ್ರೊಮಿಕ್ ವೆರಿಯಬಲ್ ಟೈಮಿಂಗ್ (ಡಿವಿಟಿ) ತಂತ್ರಜ್ಞಾನವನ್ನು ಡುಕಾಟಿ ಆಮದು ಮಾಡಿಕೊಂಡಿದೆ. ಇದು ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.

ಇನ್ನು ಮುಂದೆ ಇದು 'ಡುಕಾಟಿ ಟೆಸ್ಟಾಸ್ಟ್ರೆಟ್ಟಾ ಡಿವಿಟಿ' ಎಂಜಿನ್ ಎಂದೇ ಗುರಿತಿಸ್ಪಡಲಿದ್ದು, 2015 ಮಲ್ಟಿ ಸ್ಟ್ರಾಡಾದಲ್ಲಿ ಪಾದಾರ್ಪಣೆಗೈಯಲಿದೆ.
ಡುಕಾಟಿಯ ಹೊಸ ಡಿವಿಟಿ ಎಂಜಿನ್ ಪೀಕ್ ಪವರ್ ಜೊತೆಗೆ ಗರಿಷ್ಠ ಆವರ್ತನದಲ್ಲೂ ಪರಿಣಾಮಕಾರಿ ಎನಿಸಿಕೊಳ್ಳಲಿದೆ. ಹಾಗೆಯೇ ನಯವಾದ ನಿರ್ವಹಣೆಗೆ ಸಹಕಾರಿಯಾಗಲಿದೆ.
ಇವೆಲ್ಲದರ ಪರಿಣಾಮವಾಗಿ 1198 ಸಿಸಿ ವಿ ಟ್ವಿನ್ ಎಂಜಿನ್ 160 ಅಶ್ವಶಕ್ತಿ ಉತ್ಪಾದಿಸಲಿದೆ. ಇದು ಇಂಧನ ಬಳಕೆಯನ್ನು ಕಡಿಮೆ ಮಾಡಲಿದೆ.


Click it and Unblock the Notifications