ದೆಹಲಿ ಮಹಿಳೆಯರಿಗೆ ಹೆಲ್ಮೆಟ್ ಬಳಕೆ ಕಡ್ಡಾಯ

By Nagaraja

ಗಮನಾರ್ಹ ಬೆಳವಣಿಗೆಯೊಂದರಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಚಲಿಸುವ ಹಿಂಬದಿ ಮಹಿಳಾ ಸವಾರರು ಸಹ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಹಾಗಿದ್ದರೂ ಈ ನಿಯಮದಿಂದ ಸಿಖ್ಖ್ ಮಹಿಳೆಯರನ್ನು ಹೊರತುಪಡಿಸಲಾಗಿದೆ.

ಧಾರ್ಮಿಕ ಭಾವನೆಗೆ ಗಮನಕ್ಕೆ ತೆಗೆದುಕೊಂಡು ಸಿಖ್ಖ್ ಮಹಿಳೆಯರಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ. ಇದುವರೆಗೆ ಮಹಿಳಾ ಸಹ ಪ್ರಯಾಣಿಕರು ಹೆಲ್ಮೆಟ್ ಧರಿಸುವುದು ಐಚ್ಛಿಕ ಮಾತ್ರವಾಗಿತ್ತು.

Helmets

ಈ ಸಂಬಂಧ ದೆಹಲಿ ಸರಕಾರ ಅಧಿಸೂಚನೆ ಹೊರಡಿಸಿದ್ದು, ಎಲ್ಲ ಮಹಿಳೆಯರ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇದರಂತೆ 1993ರ ದೆಹಲಿ ಮೋಟಾರು ವಾಹನ ಕಾಯ್ದೆಯಲ್ಲಿ ಬದಲಾವಣೆ ತರಲಾಗಿದೆ.

ಸಾರಿಗೆ ಇಲಾಖೆಯ ವರದಿಗಳ ಪ್ರಕಾರ 2012ನೇ ಇಸವಿಯಲ್ಲಿ ದೆಹಲಿಯಲ್ಲಿ ಮಾತ್ರವಾಗಿ 576 ಮಹಿಳಾ ದ್ವಿಚಕ್ರ ಸವಾರರು ಅಪಘಾತಕ್ಕೆ ಬಲಿಯಾಗಿದ್ದರು. ಮಹಿಳೆಯರು ಹೆಲ್ಮೆಟ್ ಧರಿಸದಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿತ್ತು.

ಇದರಿಂದಾಗಿ ಇನ್ನು ಮುಂದೆ ದೆಹಲಿಯಲ್ಲಿ ಸಿಖ್ಖ್ ಮಹಿಳೆಯರನ್ನು ಹೊರತುಪಡಿಸಿ ಇತರ ಮಹಿಳಾ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದಲ್ಲಿ ದಂಡ ತೆರಬೇಕಾದಿತು ಎಚ್ಚರ!

More from DriveSpark

Article Published On: Saturday, August 30, 2014, 15:09 [IST]
English summary
Helmets Made Mandatory for Women Riders In Delhi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+