2015ರಲ್ಲಿ ಲಾಂಚ್ ಆಗಲಿದೆ ಹೀರೊ ಲೀಪ್ ಹೈಬ್ರಿಡ್ ಸ್ಕೂಟರ್

By Nagaraja

ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, 2015ನೇ ಸಾಲಿನಲ್ಲಿ ಲೀಪ್ (Leap) ಹೈಬ್ರಿಡ್ ಸ್ಕೂಟರ್ ಲಾಂಚ್ ಮಾಡುವ ಮಹತ್ತರ ಯೋಜನೆ ಹೊಂದಿದೆ.

ಜಾಗತಿಕ ಮಾರುಕಟ್ಟೆಯತ್ತ ಗಮನ ಕೇಂದ್ರಿಕರಿಸಿರುವ ಹೀರೊ, ಇತ್ತೀಚೆಗಷ್ಟೇ ಬ್ರಿಜಿಲ್‌ನಲ್ಲಿ ತನ್ನ ಘಟಕ ತೆರೆಯುವುದಾಗಿ ತಿಳಿಸಿತ್ತು. ಅಂದ ಹಾಗೆ ಹೀರೊ ಲೀಪ್ ಹೈಬ್ರಿಡ್ ಸ್ಕೂಟರ್ 2012 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.


ವರದಿಗಳ ಪ್ರಕಾರ 2015ರಲ್ಲಿ ಹೀರೊ ಲೀಪ್ ಹೈಬ್ರಿಡ್ ಸ್ಕೂಟರ್ ಭಾರತ ಮಾರುಕಟ್ಟೆ ಪ್ರವೇಶವಾಗಲಿದೆ. ಇದು ಭಾರತೀಯ ಸ್ಕೂಟರ್ ಅಭಿಮಾನಿಗಳ ಪಾಲಿಗೆ ಹೊಸ ಅನುಭವವಾಗಲಿದ್ದು, ಹೆಚ್ಚು ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಅದೇ ಹೊತ್ತಿಗೆ ಲೀಪ್ ಹೈಬ್ರಿಡ್ ಸ್ಕೂಟರನ್ನು ಅಮೆರಿಕ, ಯುರೋಪ್‌ಗಳಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಪರಿಚಯಿಸುವ ಯೋಜನೆಯನ್ನು ಹೀರೊ ಹೊಂದಿದೆ. 124 ಸಿಸಿ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಲೀಪ್ ಹೈಬ್ರಿಡ್ ಸ್ಕೂಟರ್ 11 ಅಶ್ವಶಕ್ತಿ ಉತ್ಪಾದಿಸಲಿದೆ. ಇದರ ಜೊತೆಗೆ ಲಿಯಾನ್ ಬ್ಯಾಟರಿ ಪ್ಯಾಕ್ ಸಹ ಲಗತ್ತಿಸಲಾಗಿದೆ.

hero leap

ಪ್ರಸ್ತುತ ಲೀಪ್ ಹೈಬ್ರಿಡ್ ಸ್ಕೂಟರ್ ಗಂಟೆಗೆ 100 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇದು ಗುರ್ಗಾಂವ್ ಘಟಕದಲ್ಲಿ ಜೋಡಣೆಯಾಗಲಿದೆ. ಇನ್ನು ವಾರ್ಷಿಕವಾಗಿ 6,000 ಯುನಿಟ್ ಮಾರಾಟ ಮಾಡುವ ಗುರಿಯನ್ನು ಹೀರೊ ಹೊಂದಿರುತ್ತದೆ. ಹಾಗೆಯೇ ಬೇಡಿಕೆಯ ಅನುಗುಣವಾಗಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಇರಾದೆ ಹೊಂದಿದೆ.

More from DriveSpark

Article Published On: Monday, June 23, 2014, 15:18 [IST]
English summary
Hero MotoCorp is growing by leaps and bounds, they have set their sights on international markets and are dominating the domestic market. They recently announced they would set a manufacturing facility in Brazil. They will also be venturing into hybrid scooters, which it had showcased as a concept during the 2012 Auto Expo in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+