ಹೀರೊ ಆಗುವರೇ ಕ್ರಿಸ್ಟಿಯಾನೋ ರೋನಾಲ್ಡೊ ?

By Nagaraja

ಗಾಲ್ಫ್‌ನ ಜೀವಂತ ದಂತಕಥೆ ಟೈಗರ್ ವುಡ್ಸ್ ಜೊತೆಗೆ ನಾಲ್ಕು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿರುವ ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಮಗದೊರ್ವ ಐಕಾನಿಕ್ ಆಟಗಾರರನ್ನು ತನ್ನತ್ತ ಸೆಳೆಯುವತ್ತ ಇರಾದೆಯಲ್ಲಿದೆ.

ವರದಿಗಳ ಪ್ರಕಾರ ಪೋರ್ಚುಗಲ್‌ ಪುಟ್ಬಾಲ್ ತಂಡದ ನಾಯಕ ಹಾಗೂ ವಿಶ್ವದ ಜನಪ್ರಿಯ ಕಾಲ್ಚೆಂಡು ಆಟಗಾರರಲ್ಲಿ ಓರ್ವರಾಗಿರುವ ಕ್ರಿಸ್ಟಿಯಾನೊ ರೋನಾಲ್ಡೊ ಮೇಲೆ ಹೀರೊ ಕಣ್ಣಾಯಿಸಿದೆ.

ronaldo

ಈ ಮೂಲಕ ದಕ್ಷಿಣ ಅಮೆರಿಕ ಹಾಗೂ ಯುರೋಪ್ ರಾಷ್ಟ್ರಗಳಲ್ಲಿ ತನ್ನ ಮಾರಾಟ ಇನ್ನಷ್ಟು ಕುದುರಿಸಿಕೊಳ್ಳುತ್ತಿರುವುದು ಸಂಸ್ಥೆಯ ಇರಾದೆಯಾಗಿದೆ.

ರೋನಾಲ್ಡೋ ಅಲ್ಲದಿದ್ದಲ್ಲಿ 2014 ಪುಟ್ಬಾಲ್ ವಿಶ್ವಕಪ್ ಸ್ಟಾರ್ ಆಟಗಾರರಲ್ಲಿ ಓರ್ವರಾಗಿರುವ ಕೊಲಂಬಿಯಾದ ಜೇಮ್ಸ್ ರೋಟ್ರಿಗಸ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ಮಾಡುವುದು ಹೀರೊ ಗುರಿಯಾಗಿದೆ.

james

23ರ ಹರೆಯದ ರೋಟ್ರಿಗಸ್ ಕಳೆದ ವಿಶ್ವಕಪ್‌ನಲ್ಲಿ ಆರು ಗೋಲುಗಳನ್ನು ಬಾರಿಸಿದ್ದರಲ್ಲದೆ ಅರ್ಹವಾಗಿಯೇ 'ಗೋಲ್ಡನ್ ಬೂಟ್' ಪ್ರಶಸ್ತಿಗೂ ಭಾಜನರಾಗಿದ್ದರು.

ಕೊಲಂಬಿಯಾದಲ್ಲಿ ನಿರ್ಮಾಣ ಘಟಕವನ್ನು ತೆರೆದುಕೊಂಡಿರುವ ಹೀರೊ, ಲ್ಯಾಟಿನ್ ಅಮೆರಿಕದಲ್ಲಿ ಮಾರಾಟ ಗುರಿಯಿರಿಸಿಕೊಂಡಿದೆ. ಅಲ್ಲದೆ ಈಗಾಗಲೇ 120 ಡೀಲರ್ ಔಟ್ಲೆಟ್‌ಗಳಲ್ಲಾಗಿ ಆರು ಮಾದರಿಗಳನ್ನು ಪರಿಚಯಿಸಿದೆ.

More from DriveSpark

Article Published On: Friday, December 5, 2014, 16:36 [IST]
English summary
Hero MotoCorp Eyeing Cristiano Ronaldo & James Rodriguez After Woods
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+