ಧಾರಾವಾಡದಲ್ಲಿ ಹೀರೊ ಘಟಕ; 25,000 ಉದ್ಯೋಗ ಸೃಷ್ಟಿ
ಈ ಹಿಂದೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಕರ್ನಾಟಕದಲ್ಲಿ ಹೊಸ ಘಟಕ ತೆರೆಯುವುದಕ್ಕೆ ಉತ್ಸುಕತೆಯನ್ನು ಹೊಂದಿತ್ತು. ಆದರೆ ಸರಕಾರದ ನಿರಾಸಕ್ತಿಯಿಂದ ಕೈತಪ್ಪುವ ಭೀತಿ ಹಬ್ಬಿತ್ತು.
ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೀರೊ ಸಂಸ್ಥೆಯ ನಾಲ್ಕನೇ ಘಟಕ ಧಾರಾವಾಡದಲ್ಲೇ ತೆರೆಯಲು ಅನುವು ಮಾಡಿಕೊಡಲಾಗುವುದು ಎಂಬುದನ್ನು ಸ್ಪಷ್ಟಪಡಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.

1,450 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೀರೊ ಘಟಕದಲ್ಲಿ ವಾರ್ಷಿಕವಾಗಿ 1.8 ದಶಲಕ್ಷ ಯುನಿಟ್‌ಗಳನ್ನು ನಿರ್ಮಿಸುವ ಸಾಮರ್ಥ್ಯ ಹೊಂದಿರಲಿದೆ. ಈ ಮೂಲಕ 25,000ದಷ್ಟು ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ.
ಹೀರೊ ಹೊಸ ಘಟಕ ನಿರ್ಮಾಣಕ್ಕೆ ಧಾರಾವಾಡ ಮಮ್ಮಿಗಟ್ಟಿ ಬಳಿ 300 ಎಕ್ರೆ ಭೂ ಸ್ವಾಧೀನ ಪಡಿಸಬೇಕಾಗಿರುವುದು ಗಮನಾರ್ಹವೆನಿಸಿದೆ. ಅಂದ ಹಾಗೆ ಧಾರಾವಾಡದಲ್ಲಿ ಈಗಾಗಲೇ ಟಾಟಾ ಮಾರ್ಕೊಪೊಲೊ ಮೋಟಾರ್ಸ್, ಬಸ್ಸುಗಳ ತಯಾರಿಕೆಯನ್ನು ಹೊಂದಿದೆ.


Click it and Unblock the Notifications








