ಎಪ್ರಿಲ್ ತಿಂಗಳ ಮಾರಾಟದಲ್ಲಿ ಹೀರೊ ಶೈನಿಂಗ್
ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, 2014 ಎಪ್ರಿಲ್ ತಿಂಗಳ ಮಾರಾಟದಲ್ಲಿ ಶೇಕಡಾ 14.41ರಷ್ಟು ಏರಿಕೆ ದಾಖಲಿಸಿಕೊಂಡಿದೆ.
2014 ಎಪ್ರಿಲ್ ತಿಂಗಳ ಮಾರಾಟದಲ್ಲಿ ಹೀರೊ ಒಟ್ಟು 5,71,054 ಯುನಿಟ್‌ಗಳನ್ನು ಮಾರಾಟ ಮಾಡಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಸ್ಥೆಯು 4,99,113 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.

ಕಳೆದ ಕೆಲವು ತಿಂಗಳುಗಳಲ್ಲಿ ಕಂಪನಿ ಅನುಸರಿಸಿರುವ ನೀತಿಯ ಫಲವಾಗಿಯೇ ಪ್ರಸಕ್ತ ಆರ್ಥಿಕ ಸಾಲಿನ ಮೊದಲ ತಿಂಗಳ ಮಾರಾಟದಲ್ಲಿ ಏರುಗತಿ ಸಾಧಿಸುವಲ್ಲಿ ನೆರವಾಗಿದೆ ಎಂದು ಸಂಸ್ಥೆಯು ಪತ್ರಿಕಾ ವರದಿಯಲ್ಲಿ ತಿಳಿಸಿದೆ.
ಹೀರೊ ಮೊಟೊಕಾರ್ಪ್, ಇತ್ತೀಚೆಗಷ್ಟೇ ಐಕಾನಿಕ್ ಸ್ಪ್ಲೆಂಡರ್ ಫ್ಯಾಮಿಲಿಗೆ ಇನ್ನೊಂದು ಹೊಸ ಐಸ್ಮಾರ್ಟ್ ಮಾದರಿಯನ್ನು ಪರಿಚಯಿಸಿತ್ತು. ಇದು ಕೂಡಾ ಮಾರುಕಟ್ಟೆಯಲ್ಲಿ ತ್ವರಿತ ಗತಿಯ ಪರಿಣಾಮ ಬೀರುವಲ್ಲಿ ಯಶಸ್ವಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.


Click it and Unblock the Notifications








