ಇನ್ನು ಹೀರೊ ಬೈಕ್‌ಗಳನ್ನು ಆನ್ಲೈನ್‌ನಲ್ಲಿ ಖರೀದಿಸಿ!

By Nagaraja

ಇತ್ತೀಚೆಗಷ್ಟೇ ಸಾಗಿದ ಗೂಗಲ್ ಆನ್ಲೈನ್ ಶಾಪಿಂಗ್ ಫೇಸ್ಟಿವಲ್‌ನಲ್ಲಿ (ಜಿಒಎಸ್‌ಎಫ್) 700ರಷ್ಟು ಬೈಕ್‌ಗಳ ಮಾರಾಟದಿಂದ ಉತ್ಸಾಹಿತಗೊಂಡಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಅತಿ ಶೀಘ್ರದಲ್ಲೇ ಆನ್ಲೈನ್‌ನಲ್ಲಿ ಮಾರಾಟ ತೆರೆದುಕೊಳ್ಳುವ ಯೋಜನೆ ಹೊಂದಿದೆ.

ವರದಿಗಳ ಪ್ರಕಾರ ಆನ್ಲೈನ್ ಶಾಪಿಂಗ್ ವೆಬ್‌ಸೈಟ್ ಸ್ನಾಪ್‌ಡೀಲ್‌ನೊಂದಿಗೆ ಒಪ್ಪಂದಕ್ಕೆ ಹೀರೊ ಸಹಿ ಹಾಕಿದ್ದು, ಅತಿ ಶೀಘ್ರದಲ್ಲೇ ಅಂತರ್ಜಾಲದಲ್ಲಿ ಹೀರೊ ಶ್ರೇಣಿಯ ಬೈಕ್‌ಗಳು ಮಾರಾಟಕ್ಕೆ ಲಭ್ಯವಾಗಲಿದೆ. ಈ ಮೂಲಕ ಇ-ವಾಣಿಜ್ಯಕ್ಕೆ ಹೀರೊ ಎಂಟ್ರಿ ಕೊಡಲಿದೆ.

Hero MotoCorp

ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯೊಂದಿಗೆ ಈಗಾಗಲೇ ಪಾಲುದಾರಿಕೆ ಹೊಂದಿರುವ ಸ್ನಾಪ್‌ಡೀಲ್ ಸ್ಕಾರ್ಪಿಯೊ, ರೊಡಿಯೊ ಸ್ಕೂಟರ್, ಸೆಂಚುರೊ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. ಅಷ್ಟೇ ಯಾಕೆ ಹೀರೊ ಎಲೆಕ್ಟ್ರಿಕ್ ಸ್ಕೂಟರ್‌ಗಳ ಜೊತೆಗೆ ಆಟೋಮೊಬೈಲ್ ಉಪಕರಣ ಹಾಗೂ ಇತರ ಆಕ್ಸೆಸರಿಗಳು ಸಹ ಮಾರಾಟವಾಗುತ್ತಿದೆ.

ಇದೀಗಿನ ಒಪ್ಪಂದದ ಜೊತೆಗೆ ಸಂಸ್ಥೆಯ ಜನಪ್ರಿಯ ಮಾದರಿಗಳಾದ ಪ್ಯಾಶನ್ ಪ್ರೊ, ಸ್ಪ್ಲೆಂಡರ್ ಪ್ಲಸ್, ಕರಿಜ್ಮಾ ಹಾಗೂ ಇಗ್ನಿಟರ್ ಮಾದರಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಸಾಧ್ಯವಾಗಲಿದೆ.

ಆನ್‌ಲೈನ್‌ನಲ್ಲಿ ಬೈಕ್ ಖರೀದಿಸಲು ಬಯಸುವ ಗ್ರಾಹಕರಿಗೆ ತಮ್ಮ ಸಮೀಪದ ಡೀಲರ್‌ಶಿಪ್ ಬಗ್ಗೆ ಮಾಹಿತಿ ಒದಗಿಸಲಿದೆ. ಅಲ್ಲದೆ ಹಣ ಪಾವತಿ ಬಳಿಕ ಡೀಲರುಗಳು ಗಾಡಿ ಹಾಗೂ ಅಗತ್ಯ ಪ್ರಮಾಣ ಪತ್ರಗಳನ್ನು ಹಸ್ತಾಂತರಿಸಲಿದೆ. ಇಎಂಐ ಅಥವಾ ಕ್ರೆಡಿಟ್ ಕಾರ್ಡ್ ಮುಖಾಂತರವೂ ದುಡ್ಡು ಪಾವತಿಸುವ ಆಯ್ಕೆ ಇರಲಿದೆ.

Article Published On: Thursday, December 18, 2014, 11:56 [IST]
English summary
Hero MotoCorp - Snapdeal, have signed a deal to sell two-wheelers online soon. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+