ಹೀರೊದಿಂದ ಬರಲಿದೆ 2 ಹೊಸ ಆಕರ್ಷಕ ಸ್ಕೂಟರ್

By Nagaraja

ಬೈಕ್ ಮಾತ್ರವಲ್ಲದೆ ಸ್ಕೂಟರ್ ವಿಭಾಗದಲ್ಲಿ ಪ್ರಭಾವಿ ಎನಿಸಿಕೊಂಡಿರುವ ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್, ಮುಂದಿನ ವರ್ಷದಲ್ಲಿ ಎರಡು ಹೊಸ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ.

ಭಾರತದಲ್ಲಿ ಪ್ರಮುಖವಾಗಿಯೂ ಪಟ್ಟಣ ಪ್ರದೇಶಗಳಲ್ಲಿ ಸ್ಕೂಟರ್‌ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದರೆ ಯಾವ ಸ್ಕೂಟರ್ ಮಾದರಿಗಳನ್ನು ಬಿಡುಗಡೆ ಮಾಡಲಿದೆ ಎಂಬುದನ್ನು ಸಂಸ್ಥೆ ರಹಸ್ಯವಾಗಿಟ್ಟಿದೆ. ಇದು ಬೈಕ್ ಪ್ರೇಮಿಗಳಲ್ಲಿ ಇನ್ನಷ್ಟು ಕುತೂಹಲತೆ ಸೃಷ್ಟಿಸುವಲ್ಲಿ ಕಾರಣವಾಗಿದೆ.

Hero MotoCorp

ಇವೆರಡು ಸ್ಕೂಟರ್‌ಗಳು ಮುಂದಿನ ಸಾಲಿನಲ್ಲಿ ಪರಿಚಯವಾಗಲಿದೆ. ಅಲ್ಲದೆ 250ಸಿಸಿಗಿಂತಲೂ ಮೇಲ್ಪಟ್ಟ ವಿಭಾಗದಲ್ಲಿ ಹೊಸ ಬೈಕ್ ಪರಿಚಯಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ.

ಇದೇ ಸಂದರ್ಭದಲ್ಲಿ ಬಾಂಗ್ಲಾದೇಶ, ಕೊಲಂಬಿಯಾ ಸೇರಿದಂತೆ ಜಾಗತಿಕವಾಗಿ 5,000 ಕೋಟಿ ರು.ಗಳ ಹೂಡಿಕೆ ಯೋಜನೆಯನ್ನು ಸಂಸ್ಥೆ ಬಹಿರಂಗಪಡಿಸಿದೆ. ಅಂತೆಯೇ 2020ರ ವೇಳೆಯಾಗುವಾಗ 50 ಜಾಗತಿಕ ಮಾರುಕಟ್ಟೆಗೆ ಎಂಟ್ರಿ ಕೊಡುವುದು ಸಂಸ್ಥೆಯ ಗುರಿಯಾಗಿದೆ.

ಹಾಗೆಯೇ ರಾಜಸ್ತಾನದ ನಿಮ್ರಾನಾ ಘಟಕದಲ್ಲಿ ವಾರ್ಷಿಕವಾಗಿ 7.5 ಲಕ್ಷ ಯುನಿಟ್ ಸ್ಕೂಟರ್ ಹಾಗೂ ಮೋಟಾರ್‌ಸೈಕಲ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂಬುದನ್ನು ಸಂಸ್ಥೆ ತಿಳಿಸಿದೆ. ಇನ್ನು ಸಂಸ್ಥೆಯ ಐದು ಹಾಗೂ ಆರನೇ ಘಟಕ ಅನುಕ್ರಮವಾಗಿ ಗುಜರಾತ್ ಮತ್ತು ಆಂಧ್ರಪ್ರದೇಶದಲ್ಲಿ ತಲೆಯೆತ್ತಲಿದೆ. ಸದ್ಯ ಹೀರೊ ಮೊಟೊಕಾರ್ಪ್ ದೇಶದಲ್ಲಿ 23 ವಿವಿಧ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

More from DriveSpark

Article Published On: Tuesday, October 21, 2014, 13:05 [IST]
English summary
Hero MotoCorp has confirmed it will be launching two new scooters in the coming year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+