ಅಮೆರಿಕ, ಬ್ರೆಜಿಲ್‌ಗೆ ಕಾಲಿಡಲಿರುವ ಹೀರೊ ಮೊಟೊಕಾರ್ಪ್

By Nagaraja

ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹಾಗೆಯೇ ಗ್ರಾಹಕರಿಂದ ಅತಿ ಹೆಚ್ಚು ಮನ್ನಣೆಗೆ ಪಾತ್ರವಾಗಿರುವ ಹೀರೊ ಮೊಟೊಕಾರ್ಪ್, ತನ್ನ ಮಾರಾಟ ಪ್ರದೇಶವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದ್ದು, ಮುಂದಿನ ವರ್ಷಗಳಿಂದ ಅಮೆರಿಕ, ಬ್ರೆಜಿಲ್‌ಗಳಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಕಾಲಿಡಲಿದೆ.

ಬೆಳೆದು ಬರುತ್ತಿರುವ ಭಾರತದಲ್ಲಿ ಬೆಲೆಗೆ ತಕ್ಕ ಗುಣಮಟ್ಟತೆ ನೀಡುವಲ್ಲಿ ಹೀರೊ ಯಶಸ್ಸನ್ನು ಕಂಡಿದೆ. ಆದರೆ ಅಮೆರಿಕ, ಬ್ರೆಜಿಲ್‌ನಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿ ಹೇಗೆ ನಂಬಿಕೆಯನ್ನು ಉಳಿಸಿಕೊಳ್ಳಲಿದೆ ಎಂಬುದು ಪ್ರಶ್ನೆಯ ವಿಷಯವಾಗಿದೆ.

hero motocorp

ವರದಿಗಳ ಪ್ರಕಾರ ಮುಂದಿನ ವರ್ಷ ಅಮೆರಿಕ ಮಾರುಕಟ್ಟೆ ಪ್ರವೇಶಿಸಿರುವ ಹೀರೊ, 2016ರಲ್ಲಿ ಬ್ರೆಜಿಲ್ ರಾಷ್ಟ್ರವನ್ನು ಕಾಲಿಡಲಿದೆ. ಆರಂಭದಲ್ಲಿ ಅಮೆರಿಕದಲ್ಲಿ 110-125 ಸಿಸಿ ಬೈಕ್ ಹಾಗೂ ಸ್ಕೂಟರುಗಳನ್ನು ಪರಿಚಯಿಸುವ ಯೋಜನೆಯನ್ನು ಹೀರೊ ಹೊಂದಿದೆ. ಇದಾದ ಬಳಿಕ ಗರಿಷ್ಠ ನಿರ್ವಹಣೆಯ ಬೈಕ್‌ಗಳನ್ನು ಪರಿಚಯಿಸಲಿದೆ.

ಅಮೆರಿಕದಲ್ಲಿ ಇಬಿಆರ್ ಸಹಭಾಗಿತ್ವದೊಂದಿಗೆ ಹೀರೊ ತನ್ನ ಸಾನಿಧ್ಯ ವ್ಯಕ್ತಪಡಿಸಲಿದೆ. ನಿಮ್ಮ ಮಾಹಿತಿಗಾಗಿ ಸ್ಪೋರ್ಟ್ಸ್ ಬೈಕ್ ಸಂಸ್ಥೆಯಾಗಿರುವ ಎರಿಕ್ ಬ್ಯುಯೆಲ್ ರೇಸಿಂಗ್ ಸಂಸ್ಥೆಯಲ್ಲಿ ಹೀರೊ ಶೇಕಡಾ 49.2ರಷ್ಟು ಶೇರನ್ನು ಹೊಂದಿದೆ.

ಅಮೆರಿಕ ಮಾರುಕಟ್ಟೆಗಾಗಿ ಜಂಟಿಯಾಗಿ ಕಾರ್ಯಾಚರಿಸಲಿರುವ ಹೀರೊ ಹಾಗೂ ಇಬಿಆರ್ ನೂತನ ಬೈಕ್‌ಗಳನ್ನು ಪರಿಚಯಿಸಲಿದೆ. ಭವಿಷ್ಯದಲ್ಲಿ ಇದು ಭಾರತ ಮಾರುಕಟ್ಟೆಯನ್ನು ಪ್ರವೇಶಿಸಿದ್ದಲ್ಲೂ ಅಚ್ಚರಿಪಡಬೇಕಾಗಿಲ್ಲ. ಬದಲಾಗಿ ಇದು ಭಾರತೀಯರ ಪಾಲಿಗೆ ಬೋನಸ್ ಆಗಿ ಪರಿಣಮಿಸಿದೆ.

ಕಡಿಮೆ ಎಂಜಿನ್ ಸಾಮರ್ಥ್ಯದ ಹೆಚ್ಚು ಇಂಧನ ಕ್ಷಮತೆಯ ವಿಶೇಷವಾಗಿಯೂ ನಗರ ವಾಹಕ ಬೈಕ್‌ಗಳಲ್ಲಿ ಹೀರೊ ಹೆಚ್ಚು ನಂಬಿಕೆಯನ್ನಿರಿಸಿಕೊಂಡಿದ್ದು, ಆರಂಭದಲ್ಲಿ ದೇಶದಿಂದಲೇ ರಫ್ತಾಗಲಿದೆ. ಬಳಿಕ ಕೊಲಂಬಿಯಾದಲ್ಲಿ ಬರೋಬ್ಬರಿ 70 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯಲ್ಲಿ ತನ್ನದೇ ಆದ ತಯಾರಕ ಘಟಕ ತೆರೆದುಕೊಳ್ಳಲಿದೆ.

ಒಟ್ಟಿನಲ್ಲಿ ಬ್ರೆಜಿಲ್ ಹಾಗೂ ಅಮೆರಿಕ ಮಾರುಕಟ್ಟೆ ಹೀರೊ ಪಾಲಿಗೆ ಸವಾಲಿನ ವಿಷಯವಾಗಿರಲಿದೆ. ಈ ಮೂಲಕ ಜಗತ್ತಿದ್ಯಾಂತ ತನ್ನ ವ್ಯಾಪಾರ ಕುದುರಿಸಿಕೊಳ್ಳುವ ಇರಾದೆಯಲ್ಲಿದೆ.

More from DriveSpark

Article Published On: Saturday, June 14, 2014, 14:21 [IST]
English summary
Hero MotoCorp is gearing up to go global in a big way starting next year, first with the launch of its commuter bikes in the U.S, followed by entry into the Brazilian market in 2016.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+