ಹೋಂಡಾ 'ಆಕ್ಟಿವಾ ಐ' 125 ಸಿಸಿ ಸ್ಕೂಟರ್ ಸದ್ಯದಲ್ಲೇ ಲಾಂಚ್
ಸಮಕಾಲೀನ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್‌ಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಆಕ್ಟಿವಾ ಜನಪ್ರಿಯತೆ ಎಷ್ಟರ ಮಟ್ಟಿಗಿತ್ತೆಂದರೆ ದೇಶದ ಜನಪ್ರಿಯ ಮೈಲೇಜ್ ಬೈಕ್ ಆಗಿರುವ ಸ್ಪ್ಲೆಂಡರ್ ಮಾರಾಟ ಸಾಧನೆಯನ್ನೇ ಹಿಮ್ಮೆಟ್ಟಿಸಿತ್ತು.
ಪ್ರಸ್ತುತ ಇದರಿಂದಲೇ ಸ್ಪೂರ್ತಿ ಪಡೆದಿರುವ ಜಪಾನ್ ಮೂಲದ ಹೋಂಡಾ ಮೋಟಾರ್ ಸೈಕಲ್ಸ್ ಸಂಸ್ಥೆಯು ನೂತನ 125 ಸಿಸಿ ಆಕ್ಟಿವಾ ಸ್ಕೂಟರ್ ಆಗಿರುವ 'ಆಕ್ಟಿವಾ ಐ' ಪರಿಚಯಿಸಲು ಹೊರಟಿದೆ.

ಈಗಾಗಲೇ 2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನ ಕಂಡಿರುವ ಆಕ್ಟಿವಾ ಐ ಹೆಚ್ಚು ನಿರ್ವಹಣೆ ನೀಡಲಿದೆ. ವರದಿಗಳ ಪ್ರಕಾರ ಈ ಐಕಾನಿಕ್ ಸ್ಕೂಟರ್ ಬುಕ್ಕಿಂಗ್ ಪ್ರಕ್ರಿಯೆ ಎಪ್ರಿಲ್ ತಿಂಗಳಲ್ಲಿ ಪ್ರಾರಂಭವಾಗಲಿದೆ.
ಪ್ರಸ್ತುತ ದೇಶದಲ್ಲಿ ಸುಜುಕಿ ಹಾಗೂ ಮಹೀಂದ್ರ ಬಳಿ 125 ಸಿಸಿ ಸ್ಕೂಟರಿದೆ. ಇದೀಗ ಹೋಂಡಾ ಆಗಮನದೊಂದಿಗೆ ಸ್ಪರ್ಧೆ ಇನ್ನಷ್ಟು ಹೆಚ್ಚಲಿದೆ. ಗುಣಮಟ್ಟದ ಉತ್ಪನ್ನಗಳ ವಿಚಾರದಲ್ಲಿ ಈಗಾಗಲೇ ಉತ್ತಮ ಹೆಸರು ಕಾಪಾಡಿಕೊಂಡಿರುವ ಹೋಂಡಾ, ಆಕ್ಟಿವಾ ಐ ಮೂಲಕ ಮಗದೊಮ್ಮೆ ಸದ್ದು ಮಾಡುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.
ಅಂದ ಹಾಗೆ ನೂತನ ಆಕ್ಟಿವಾ ಐ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 8.6 ಬಿಎಚ್‌ಪಿ (10.12 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಲ್ಲದೆ 5 ಸ್ಪೋಕ್ ಅಲಾಯ್ ವೀಲ್ ಸಹ ಪಡೆದುಕೊಳ್ಳಲಿದೆ. ಇನ್ನು ಮಹೀಂದ್ರ ಡ್ಯುರೋ ಹಾಗೂ ಸುಜುಕಿ ಸ್ವಿಸ್ ಹಾಗೂ ವೆಸ್ಪಾ ಎಲ್‌ಎಕ್ಸ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ.


Click it and Unblock the Notifications