ಹೋಂಡಾ ಸಿಬಿ ಡ್ಯಾಜ್ಲರ್ ಹ್ಯಾಕ್
ಈ ಹಿಂದೆ 2010ನೇ ಇಸವಿಯ ಮೇ ತಿಂಗಳಲ್ಲಿ ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಹೋಂಡಾ ಸಂಸ್ಥೆಯು 149ಸಿಸಿ ಸಿಬಿ ಡ್ಯಾಜ್ಲರ್ ಬೈಕನ್ನು ಲಾಂಚ್ ಮಾಡಿತ್ತು.
ಆದರೆ ಮುಂದುವರಿದ ಬೆಳವಣಿಗೆಗಳಲ್ಲಿ ಹಲವು ಕಾರಣಗಳಿಂದಾಗಿ ನಿರೀಕ್ಷಿದಷ್ಟು ಯಶ ಸಾಧಿಸುವಲ್ಲಿ ಡ್ಯಾಜ್ಲರ್ ವಿಫಲವಾಗಿತ್ತು. ಇದರ ಭಾಗವೆಂಬಂತೆ ಸಿಬಿ ಡ್ಯಾಜ್ಲರ್ ಹೋಂಡಾ ಡೀಲರುಗಳ ಬಳಿಯಿಂದಲೂ ಮಾಯಾವಾಗಿತ್ತು.

ಇದೀಗ ಹೋಂಡಾ ಅಧಿಕೃತ ವೆಬ್‌ಸೈಟ್‌ನಿಂದಲೂ ಡ್ಯಾಜ್ಲರ್ ತೆಗೆದು ಹಾಕಲಾಗಿದೆ. ಈ ಸ್ಥಾನವನ್ನು ಹೋಂಡಾದ ಇನ್ನೊಂದು ಸಿಬಿ ಟ್ರಿಗರ್ ತುಂಬಲಿದೆ. ಅಂದ ಹಾಗೆ 149 ಸಿಸಿ ಏರ್ ಕೂಲ್ಡ್ ಎಂಜಿನ್ ಹೊಂದಿದ್ದ (14 ಅಶ್ವಶಕ್ತಿ) ಡ್ಯಾಜ್ಲರ್ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿತ್ತು. ಇದರ ದರ 66740 ರು.ಗಳಿಷ್ಟಿತ್ತು.
ಇನ್ನೊಂದೆಡೆ ಸ್ಟಾಂಡರ್ಡ್, ಡಿಎಲ್‌ಎಕ್ಸ್ ಮತ್ತು ಸಿಬಿಎಸ್‌ಗಳೆಂಬ ಮೂರು ವೆರಿಯಂಟ್‌ಗಳಲ್ಲಿ ಲಭ್ಯವಿರುವ ಸಿಬಿ ಟ್ರಿಗರ್ ಎಕ್ಸ್ ಶೋ ರೂಂ ದರ 72,431 ರು.ಗಳಿಂದ 82,386 ರು.ಗಳ ವರೆಗಿದೆ.


Click it and Unblock the Notifications