ಜಮ್ಮು ಮತ್ತು ಕಾಶ್ಮೀರ ಸಂತ್ರಸ್ತರಿಗೆ ಹೋಂಡಾ 3 ಕೋಟಿ ನೆರವು
ಇತ್ತೇಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ಭೀಕರ ಪ್ರವಾಹ ಸ್ಥಿತಿಗೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಇದೀಗ ಸಹಾಯ ಹಸ್ತದೊಂದಿಗೆ ಮುಂದೆ ಬಂದಿರುವ ಜಪಾನ್‌ನ ಬಹು ರಾಷ್ಟ್ರೀಯ ಸಂಸ್ಥೆಯಾಗಿರುವ ಹೋಂಡಾ ಮೋಟಾರು ಸಂಸ್ಥೆಯು ಜಮ್ಮು ಮತ್ತು ಕಾಶ್ಮೀರ ಪರಿಹಾರ ಕಾರ್ಯಾಚರಣೆಗಳಿಗಾಗಿ ಮೂರು ಕೋಟಿ ರು.ಗಳ ಸಹಾಯಧನವನ್ನು ಘೋಷಿಸಿದೆ.
ಪ್ರವಾಹ ಪೀಡಿತ ಜನರ ಪುನರ್ವಸತಿಗಾಗಿ ಈ ನಿಧಿಯನ್ನು ಬಳಕೆ ಮಾಡಲಾಗುವುದು. ಕೆಲವು ದಿನಗಳ ಹಿಂದೆಯಷ್ಟೇ ಪೊರಿಸ್ ಇಂಡಿಯಾ ಸಂಸ್ಥೆಯು ಪರಿಹಾರ ಕಾರ್ಯಾಚರಣೆಗಾಗಿ ಆಫ್ ರೋಡ್ ವಾಹನಗಳನ್ನು ಕಳುಹಿಸಿತ್ತು.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಹೋಂಡಾ ಮೋಟಾರು ಸಂಸ್ಥೆಯು, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಮೂರು ಕೋಟಿ ರು.ಗಳ ಚೆಕ್ ರವಾನಿಸಲಾಗಿದೆ ಎಂದಿದೆ.
ತದಾ ನಂತರ ಪ್ರತಿಕ್ರಿಯಿಸಿರುವ ಹೋಂಡಾ ಮೋಟಾರು ಕಂಪನಿ ವ್ಯವಸ್ಥಾಪಕ ಅಧಿಕಾರಿ ಹಾಗೂ ಹೋಂಡಾ ಮೋಟಾರು ಇಂಡಿಯ ಸಿಇಒ ಹಾಗೂ ಅಧ್ಯಕ್ಷರಾಗಿರುವ ಯೋಶಿಯುಕಿ ಮಟ್ಸುಮುಟೊ, "ನಾವು ಪ್ರವಾಹ ಬಾಧಿತ ಜನರಿಗೆ ಸಾಂತ್ವನ ಹಾಗೂ ಅನುಕಂಪ ವ್ಯಕ್ತಪಡಿಸುತ್ತಿದ್ದು, ಜನರು ಪ್ರಕೃತಿ ವಿಕೋಪದಿಂದಾಗಿ ಮನೆ ಹಾಗೂ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಈ ಪರಿಹಾನ ನಿಧಿ ಮೂಲಸೌಕರ್ಯ ನವೀಕರಣ ಹಾಗೂ ಸಂತ್ರಸ್ತರ ಪುನರ್ವಸತಿಗೆ ಸಹಕಾರಿಯಾಗಲಿದೆ" ಎಂದು ಆಶಿಸಿದ್ದಾರೆ.


Click it and Unblock the Notifications