ಭಾರತಕ್ಕೆ ಕೈಗೆಟುಕುವ ನಿರ್ವಹಣಾ ಬೈಕ್; ಹೋಂಡಾ ಗುರಿ

By Nagaraja

ಜಪಾನ್‌ನ ದೈತ್ಯ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ಭಾರತದ ಪ್ರಯಾಣಿಕ ದ್ವಿಚಕ್ರ ವಾಹನ ವಿಭಾಗದಲ್ಲಿ ತನ್ನ ಸಾನಿಧ್ಯವನ್ನು ಭದ್ರವಾಗಿಸಿದೆ. ಇದೀಗ ಒಂದು ಹೆಜ್ಜೆ ಮುಂದಿಟ್ಟಿರುವ ಹೋಂಡಾ ಸಂಸ್ಥೆಯು ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ದೇಶಕ್ಕೆ ನಿರ್ವಹಣಾ ಬೈಕ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ.

ಭಾರತದಲ್ಲೇ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡುವ ಮೂಲಕ ಹೋಂಡಾ ತನ್ನ ಗುರಿ ಮುಟ್ಟುವ ಯೋಜನೆ ಹೊಂದಿದೆ. ಪ್ರಸ್ತುತ ದೇಶದಲ್ಲಿ ನಿರ್ವಹಣಾ ಬೈಕ್‌ಗಳು ಲಭ್ಯವಿದ್ದರೂ ಬೆಲೆಯ ವಿಚಾರಕ್ಕೆ ಬಂದಾಗ ಕೊಂಚ ದುಬಾರಿಯೆನಿಸಿದೆ.

Honda

ಇದಕ್ಕೆ ಮುನ್ನುಡಿಯೆಂಬಂತೆ ಸಿಬಿಆರ್ 650 ಮಾದರಿಯೊಂದಿಗೆ ಹೋಂಡಾ ತನ್ನ ಯೋಜನೆ ಆರಂಭಿಸಲಿದೆ. ಇದು 2016 ಮೊದಲಾರ್ಧದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಪ್ರಸ್ತುತ ಪೂರ್ಣವಾಗಿ ಆಮದು ಮಾಡಲಾಗಿರುವ ನಿರ್ವಹಣಾ ಬೈಕ್‌ಗಳನ್ನು ಹೋಂಡಾ ಮೋಟಾರ್‌ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಸಂಸ್ಥೆಯು ಒದಗಿಸುತ್ತಿದೆ. ಇದು 14ರಿಂದ 31 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

ಇದೀಗ ಸಿಬಿಆರ್ 650 ಮಾದರಿಯನ್ನು ಗ್ರಾಹಕರಿಗೆ 10 ಲಕ್ಷ ರು.ಗಳ ದರ ವ್ಯಾಪ್ತಿಯಲ್ಲೇ ಗ್ರಾಹಕರಿಗೆ ಒದಗಿಸುವ ಯೋಜನೆಯನ್ನು ಹೋಂಡಾ ಹೊಂದಿದೆ. ಈ ಮೂಲಕ ದೇಶದಲ್ಲೇ ಹೈ ಎಂಡ್ ಬೈಕ್‌ಗಳ ಜೋಡಣೆ ಕಾರ್ಯಕ್ಕೂ ಚುರುಕು ಮುಟ್ಟಿಸಲಿದೆ.

ಸದ್ಯ ಭಾರತದಲ್ಲಿ ಹೋಂಡಾ ಸಂಸ್ಥೆಯು ಗೋಲ್ಡ್ ವಿಂಗ್ 1800, ವಿಟಿ1300 ಸಿಎಕ್ಸ್, ವಿಎಫ್‌ಆರ್200ಎಫ್, ಸಿಬಿಆರ್1000 ಆರ್‌ಆರ್ ಮತ್ತು ಸಿಬಿ1000 ಆರ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Article Published On: Monday, November 10, 2014, 16:41 [IST]
English summary
Japanese motorcycle maker, Honda is looking forward to offer performance motorcycles to the Indian market at an affordable price by assembling them in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+