2015 ಇಂಡಿಯಾ ಬೈಕ್ ವೀಕ್ ಎಲ್ಲಿ ನಡೆಯುತ್ತೇ ಗೊತ್ತೇನು?
ಬೈಕ್ ಪ್ರೇಮಿಗಳ ಪಾಲಿಗೆ ಅತಿ ದೊಡ್ಡ ಹಬ್ಬವಾಗಿರುವ 2015 ಇಂಡಿಯಾ ಬೈಕ್ ವೀಕ್‌ಗೆ ವೇದಿಕೆ ಸಿದ್ಧಗೊಂಡಿದೆ. ನೀವು ಯಾವುದೇ ಗೊಂದಲಕ್ಕೀಡಾಗುವುದು ಬೇಡ? ಯಾಕೆಂದರೆ ಮುಂದಿನ ವರ್ಷಾರಂಭದ ಇಂಡಿಯಾ ಬೈಕ್ ವೀಕ್ ಕಳೆದ ವರ್ಷದ ಅದೇ ಪ್ರದೇಶದಲ್ಲಿ ನಡೆಯಲಿದೆ.
ಈ ಬಗ್ಗೆ ಹೇಳಿಕೆ ಕೊಟ್ಟಿರುವ ಅಧಿಕೃತರು 2015 ಇಂಡಿಯಾ ಬೈಕ್ ವೀಕ್ ಗೋವಾದ ವೆಗಟೊರ್‌ನಲ್ಲಿ ಫೆಬ್ರವರಿ 20 ಹಾಗೂ 21ರಂದು ನಡೆಯಲಿದೆ ಎಂದಿದೆ.

ಈ ಬಾರಿ ಹರ್ಲಿ ಡೇವಿಡ್ಸನ್ ಮತ್ತು ಫಾಕ್ಸ್ ಲೈಫ್ ಇಂಡಿಯಾ ಬೈಕ್ ವೀಕ್‌ಗೆ ಪ್ರಾಯೋಜಕತ್ವ ವಹಿಸಲಿದೆ. ಇದು ದೇಶದೆಲ್ಲೆಡೆಯ ವಾಹನ ಪ್ರೇಮಿಗಳಿಗೆ ಅದ್ಭುತ ಅನುಭವ ನೀಡಲಿದೆ.
ಅಂದ ಹಾಗೆ ಇದು ಮೂರನೇ ಬಾರಿಗೆ ಇಂಡಿಯಾ ಬೈಕ್ ವೀಕ್ ಆಯೋಜನೆಯಾಗುತ್ತಿದ್ದು, ಹಿಂದೆಂದಿಗಿಂತಲೂ ಹೆಚ್ಚು ಗ್ಲಾಮರಸ್ ಸ್ಪರ್ಶ ಪಡೆಯಲಿದೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಇದರಲ್ಲಿ ಪಾಲ್ಗೊಳ್ಳುತ್ತಿರುವ ವಾಹನ ಪ್ರೇಮಿ ಹಾಗೂ ಸ್ಪರ್ಧಾಳುಗಳ ಸಂಖ್ಯೆಯಲ್ಲೂ ಏರಿಕೆ ಕಂಡುಬರುತ್ತಿದೆ.


Click it and Unblock the Notifications