ಬೈಕ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಇಂಡಿಯನ್ ಸ್ಕೌಟ್ ಬೈಕ್

By Nagaraja

ಇದೀಗಷ್ಟೇ ಯಶಸ್ವಿಯಾಗಿ ನೇರವೇರಿರುವ 'ಬೈಕ್ ಫೆಸ್ಟಿವಲ್ ಆಫ್ ಇಂಡಿಯಾ'ದಲ್ಲಿ ಹೊಸತಾದ ಇಂಡಿಯನ್ ಸ್ಕೌಟ್ ಬೈಕ್ ಭರ್ಜರಿ ಪ್ರದರ್ಶನ ಕಂಡಿದೆ.

ಪೊಲರಿಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಾಗಿರುವ ಪೊಲರಿಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಇಂಡಿಯನ್ ಸ್ಕೌಟ್ ಬೈಕ್‌ನ್ನು ದೇಶಕ್ಕೆ ಪರಿಚಯಿಸಿದೆ.

Indian Scout

ಎರಡು ದಿನಗಳ ಪರ್ಯಂತ ಸಾಗಿದ ಈ ಬೈಕ್ ಹಬ್ಬದಲ್ಲಿ ಒಟ್ಟು ನಾಲ್ಕು ಮಾದರಿಗಳನ್ನು ಸಂಸ್ಥೆಯು ಪ್ರದರ್ಶಿಸಿತ್ತು. ಇವುಗಳಲ್ಲಿ ಇಂಡಿಯನ್ ಸ್ಕೌಟ್, ಇಂಡಿಯನ್ ಚೀಫ್ ಕ್ಲಾಸಿಕ್, ಇಂಡಿಯನ್ ಚೀಫ್ ವಿಂಟೇಜ್ ಮತ್ತು ಇಂಡಿಯನ್ ಚೀಫ್ಟೈನ್ ಪ್ರಮುಖವಾಗಿತ್ತು.

ಪ್ರಸ್ತುತ ಬೈಕ್ 11.99 ಲಕ್ಷ ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಲಿದೆ. ಅಲ್ಲದೆ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿದ್ದು, 2015 ಜನವರಿ ತಿಂಗಳಲ್ಲಿ ವಿತರಣೆ ಕಾರ್ಯ ಆರಂಭವಾಗಲಿದೆ.

ಇತ್ತೀಚೆಗಷ್ಟೇ ಅಮೆರಿಕದಲ್ಲೂ ಬಿಡುಗಡೆಯಾಗಿದ್ದ ಇಂಡಿಯನ್ ಸ್ಕೌಟ್ ಬೈಕ್, ಲಿಕ್ವಿಡ್ ಕೂಲ್ಡ್ ಮತ್ತು 69 ಕ್ಯೂಬಿಕ್ ಇಂಚಿನ ವಿ ಟ್ವಿನ್ ಎಂಜಿನ್ ಪಡೆದುಕೊಂಡಿದ್ದು, 100 ಅಶ್ವಶಕ್ತಿ ಉತ್ಪಾದಿಸುತ್ತದೆ.

Article Published On: Monday, October 6, 2014, 12:04 [IST]
English summary
Polaris India Pvt. Ltd., a wholly-owned subsidiary of Polaris Industries, showcased the newly launched motorcycle, the Indian Scout for the first time in India during the Bike Festival of India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+