ಸದ್ಯದಲ್ಲೇ ಕವಾಸಕಿಯಿಂದ ಇನ್ನೊಂದು ಜಾದೂ
ಬೈಕ್ ಪ್ರಿಯ ದೇಶಗಳಲ್ಲಿ ಒಂದೆನಿಸಿಕೊಂಡಿರುವ ಭಾರತದಲ್ಲಿ ಕ್ರೀಡಾ ಬೈಕ್‌ಗಳಿಗೂ ಹೆಚ್ಚಿನ ಮಾರುಕಟ್ಟೆಯಿದೆ. ಇದನ್ನೇ ಗಮನದಲ್ಲಿಟ್ಟುಕೊಂಡಿರುವ ಇಂಡಿಯಾ ಕವಾಸಕಿ ಮೋಟಾರ್ಸ್ (ಐಕೆಎಂ), ಇತ್ತೀಚೆಗಷ್ಟೇ ನಿಂಜಾ ಝಡ್‌ಎಕ್ಸ್-14ಆರ್, ನಿಂಜಾ ಝಡ್‌ಎಕ್ಸ್-10ಆರ್ ಲಾಂಚ್ ಮಾಡಿತ್ತು.
ಇದನ್ನು ನಿಂಜಾ 1000 ಮತ್ತು ಝಡ್1000 ಹಿಂಬಾಲಿಸಿತ್ತು. ಇನ್ನೇನು ಸ್ವಲ್ಪ ದಿನಗಳಲ್ಲಿ ಝಡ್800 ಎಂಟ್ರಿ ಕೊಡಲಿದೆ. ಇದರ ಲಾಂಚ್ ಜನವರಿಯಲ್ಲಿ ನಿಗದಿಯಾಗಿದೆ.

ಈ ನಡುವೆ ಸಾಹ ಬೈಕ್‌ಗಳನ್ನು ಜಪಾನ್ ಮೂಲದ ಈ ವಾಹನ ತಯಾರಕ ಸಂಸ್ಥೆಯು ಪರಿಚಯಿಸುತ್ತಿದೆ. ಹೌದು, ನಿಂಜಾ 650 ನೆಕ್ಡ್ ವರ್ಷನ್ ಆಗಿರುವ ಇಆರ್-6ಎನ್ ಮತ್ತು ವರ್ಸಿಸ್ 1000 ಸದ್ಯದಲ್ಲೇ ದೇಶದ ರಸ್ತೆ ಪ್ರವೇಶಿಸಲಿದೆ.
ಸಾಹಸ ಬೈಕ್ ಆಗಿರುವ ವರ್ಸಿಸ್ ತೊಂದರೆ ಮುಕ್ತ ಸವಾರಿಯ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಇನ್ ಲೈನ್ ಫೋರ್, ಫೋರ್ ಸ್ಟ್ರೋಕ್ 1043 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಈ ಮೂಲಕ 118 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಹಾಗೆಯೇ ನೆಕ್ಡ್ ಸ್ಟ್ರೀಟ್ ಬೈಕ್ ಆಗಿರುವ ಕವಾಸಕಿ ಇಆರ್-6ಎನ್, ನಗರ ಪ್ರದೇಶದ ಚಾಲನೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಫೋರ್ ಸ್ಟ್ರೋಕ್, ಪ್ಯಾರಲೆಲ್ ಟ್ವಿನ್, 649 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಟ್ಟಿದೆ. ಹಾಗೆಯೇ 72 ಬಿಎಚ್‌ಪಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಒಟ್ಟಿನಲ್ಲಿ ಈ ಎರಡು ಮಾದರಿಗಳು ಜುಲೈ ತಿಂಗಳೊಳಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಗಳು ಬಹುತೇಕ ನಿಚ್ಚಳವಾಗಿದೆ.


Click it and Unblock the Notifications