ಕವಾಸಕಿಯಿಂದ ಮಗದೊಂದು ದುಬಾರಿ ಬೈಕ್ ಭಾರತಕ್ಕೆ
ಜಪಾನ್ ಮೂಲಕ ಕವಾಸಕಿ ಭಾರತದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ವಿಶೇಷವಾಗಿಯೂ ದೇಶದ ಯುವ ಜನತೆಯು ಕವಾಸಕಿ ಬೈಕ್‌ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.
ಅಂದ ಹಾಗೆ ಇತ್ತೇಚೆಗಷ್ಟೇ ಇಟಲಿಯಲ್ಲಿ ನಡೆದ ಮಿಲಾನ್ ಮೋಟಾರು ಶೋದಲ್ಲಿ ಎಚ್2 ಹಾಗೂ ಎಚ್2ಆರ್‌ಗಳೆಂಬ ಎರಡು ಮಾದರಿಗಳು ಇದಕ್ಕೂ ಮೊದಲು ನಡೆದ 2014 ಇಂಟರ್‌ಮೋಟ್ ಶೋದಲ್ಲಿ ಭರ್ಜರಿ ಅನಾವರಣಗೊಂಡಿತ್ತು.

ಈ ಪೈಕಿ ಎಚ್2ಆರ್ ಟ್ರ್ಯಾಕ್ ಬೈಕಾಗಿದ್ದು ಸೀಮಿತ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಲಿದೆ. ಇದೇ ಸಂದರ್ಭದಲ್ಲಿ ಹೈಪರ್ ಬೈಕ್‌ನ ಸ್ಟ್ರೀಟ್ ವರ್ಷನ್ ಆಗಿರುವ ಎಚ್2 ಮಾದರಿ ಹೆಚ್ಚು ಗಮನ ಸೆಳೆಯುವಲ್ಲಿ ಕಾರಣವಾಗಿತ್ತು.
ಜಾಗತಿಕವಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಎಚ್2 ಮುಂದಿನ ವರ್ಷದ ಮಧ್ಯಂತರ ವೇಳೆಯಲ್ಲಿ ಭಾರತ ಪ್ರವೇಶ ಪಡೆಯುವ ಸಾಧ್ಯತೆಯಿದೆ. ಇದು 25ರಿಂದ 30 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಮುಂದಿನ ಪೀಳಿಗೆಯ ಮಾದರಿಗಳನ್ನು ಪರಿಚಯಿಸುವ ಮೂಲಕ ಭಾರತದಲ್ಲಿ ಹೈ ಎಂಡ್ ಬೈಕ್‌ಗಳಲ್ಲಿ ಯಮಹಾ ಹಾಗೂ ಹೋಂಡಾ ಹಿಮ್ಮೆಟ್ಟಿಸುವುದು ಕವಾಸಕಿ ಗುರಿಯಾಗಿರಲಿದೆ.
ಪ್ರಸ್ತುತ ಬೈಕ್ 4 ಸಿಲಿಂಡರ್ 998 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಪಡೆದುಕೊಳ್ಳಲಿದೆ. ಇದು 197.18 ಅಶ್ವಶಕ್ತಿ (135 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇದರಲ್ಲಿ ಏರ್ ಇಂಟೇಕ್ ಎಂಬ ವ್ಯವಸ್ಥೆಯಿರಲಿದ್ದು, ಈ ಮೂಲಕ ಹೆಚ್ಚುವರಿ 10 ಅಶ್ವಶಕ್ತಿ ಪಡೆಯಲು ಸಾಧ್ಯವಾಗಲಿದೆ.

ಇನ್ನುಳಿದಂತೆ ಸುಲಭ ಚಾಲನೆಯಾಗಿ ಕವಾಸಕಿ ಕ್ವಿಕ್ ಶಿಫ್ಟರ್, ಕವಾಸಕಿ ಇಂಟೆಲಿಜೆಟ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ, ಕವಾಸಕಿ ಲಾಂಚ್ ಕಂಟ್ರೋಲ್ ಮೋಡ್, ಕವಾಸಕಿ ಟ್ರಾಕ್ಷನ್ ಕಂಟ್ರೋಲ್ ಮುಂತಾದ ಸೌಲಭ್ಯಗಳು ದೊರಕಲಿದೆ.
ಅಂತೆಯೇ ಮಿರರ್ ಕೋಟಡ್ ಬ್ಲ್ಯಾಕ್ ಬಣ್ಣದೊಂದಿಗೆ ಹೊಸ ಕವಾಸಕಿ ಎಚ್2 ಆಗಮನವಾಗಲಿದೆ. ಇದು ಒಟ್ಟು 238.04 ಕೆ.ಜಿ ಭಾರವನ್ನು ಹೊಂದಿರಲಿದೆ.
ನುಲನ್ ಕಾರ್ ಕೇರ್ ಸೆಟ್ - ಶೇ. 10ರಷ್ಟು ರಿಯಾಯಿತಿ ಪಡೆಯಿರಿ - ತ್ವರೆ ಮಾಡಿ


Click it and Unblock the Notifications