ಕವಾಸಕಿ ನಿಂಜಾ ಬೆಲೆ 10,000 ರು.ಗಳಷ್ಟು ಏರಿಕೆ

By Nagaraja

ಈಗಲೇ ದುಬಾರಿಯಾಗಿರುವ ನಿಂಜಾ ಸೂಪರ್ ಬೈಕ್‌ನ ದರವನ್ನು ಕವಾಸಕಿ ಸಂಸ್ಥೆಯು ಇನ್ನಷ್ಟು ರು. 10,000ಗಳಷ್ಟು ಏರಿಕೆಗೊಳಿಸಿದೆ. ಇದರೊಂದಿಗೆ ಮುಂಬೈ ಎಕ್ಸ್ ಶೋ ರೂಂ ಬೆಲೆ 3.96 ಲಕ್ಷ ರು.ಗಳಿಗೆ ಏರಿಕೆಯಾಗಿದೆ.

ಎಬಿಎಸ್ ತಂತ್ರಜ್ಞಾನದ ಸೌಲಭ್ಯವೂ ಇಲ್ಲದ ಕವಾಸಕಿ ನಿಂಜಾ ದರವನ್ನು ಕನಿಷ್ಠ ಒಂದು ಲಕ್ಷವಾದರೂ ಕಡಿತಗೊಳಿಸಬೇಕೆಂಬ ಬೇಡಿಕೆ ಕೇಳಿಬಂದಿತ್ತು. ಆದರೆ ಜಪಾನ್ ಮೂಲದ ಈ ಸಂಸ್ಥೆಯು ದರ ಕಡಿತಗೊಳಿಸುವುದರ ಬದಲಾಗಿ ರು. 10,000ದಷ್ಟು ಏರಿಕೆಗೊಳಿಸಿದೆ. ಇದರೊಂದಿಗೆ ಬೈಕ್ ಪ್ರೇಮಿಗಳು ನಿರಾಸೆ ಅನುಭವಿಸುವಂತಾಗಿದೆ. ಅಷ್ಟೇ ಯಾಕೆ ದರ ಏರಿಕೆ ಮಾಡಿರುವುದಲ್ಲದೆ ಕವಾಸಕಿ ನಿಂಜಾದಲ್ಲಿ ಹೊಸ ವಿಶಿಷ್ಟತೆಗಳು ಲಭ್ಯವಿರುವುದಿಲ್ಲ.

Kawasaki Ninja 300

ಅಂದ ಹಾಗೆ ಕವಾಸಕಿ ನಿಂಜಾ 296 ಸಿಸಿ ಫೋರ್ ಸ್ಟೋಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 38 ಅಶ್ವಶಕ್ತಿ ಉತ್ಪಾದಿಸುವ (27 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ರಿಟರ್ನ್ ವಿಧದ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಕವಾಸಕಿ ಸ್ಪರ್ಧಿಯಾಗಿರುವ ಕೆಟಿಎಂ ಆರ್‌ಸಿ 390 373.27 ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು 42 ಅಶ್ವಶಕ್ತಿ (35 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ಕವಾಸಕಿಗಿಂತಲೂ 1.5 ಲಕ್ಷ ರು.ಗಳಷ್ಟು ಕಡಿಮೆ ದರದಲ್ಲಿ ದೊರಕಿದ್ದು, ಹಾಗಾಗಿ ನಿಂಜಾಗೆ ಉಳಿಗಾಲವಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Article Published On: Saturday, September 27, 2014, 9:58 [IST]
English summary
Kawasaki has hiked Ninja 300 price by INR.10,000 of its ex-showroom price tag, making the premium sports bike cost Rs. 3.96 lakhs on-road Mumbai. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+