ಕವಾಸಕಿ ಎಂಟ್ರಿ ಲೆವೆಲ್ 2015 ವುಲ್ಕನ್ ಎಸ್ ಕ್ರೂಸರ್ ಅನಾವರಣ

By Nagaraja

ಜಪಾನ್ ಮೂಲದ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಕವಾಸಕಿ ಇತ್ತೀಚೆಗಷ್ಟೇ ಝಡ್250 ಮತ್ತು ಇಆರ್-6ಎನ್ ಮೋಟಾರ್‌ಸೈಕಲ್‌ಗಳನ್ನು ಭಾರತಕ್ಕೆ ಪರಿಚಯಿಸಿತ್ತು. ಅಲ್ಲದೆ ಸೂಪರ್ ಚಾರ್ಜ್ಡ್ ಎಂಜಿನ್ ಹೊಂದಿರುವ ಬಹುನಿರೀಕ್ಷಿತ ನಿಂಜಾ ಎಚ್‌2ಆರ್ ಸೂಪರ್ ಬೈಕನ್ನು ಪ್ರದರ್ಶನಕ್ಕಿರಿಸಿತ್ತು.

ಪ್ರಸ್ತುತ ಸಂಸ್ಥೆಯು ಇದೀಗ ಹೊಸತಾದ 2015 ವುಲ್ಕನ್ ಎಸ್ ಕ್ರೂಸರ್ ಮಾದರಿಯನ್ನು ಅನಾವರಣಗೊಳಿಸಿದೆ. ಇದು ಈಗಿರುವ ನಿಂಜಾ 650 ಮತ್ತು ಇಆರ್-6ಎನ್ ತಲಹದಿಯಲ್ಲಿ ನಿರ್ಮಾಣವಾಗಲಿದೆ.


ಕವಾಸಕಿ ಎಂಟ್ರಿ ಲೆವೆಲ್ ಕ್ರೂಸರ್ ಮೋಟಾರ್‌ಸೈಕಲ್‌ಗಳ ಸಾಲಲ್ಲಿ ಇದು ಗುರುತಿಸಿಕೊಳ್ಳಲಿದೆ. ಇದು 649 ಸಿಸಿ ಲಿಕ್ವಿಡ್ ಕೂಲ್ಡ್ ಫೋರ್ ಸ್ಟ್ರೋಕ್ ಪ್ಯಾರಲಲ್ ಟ್ವಿನ್ ಎಂಜಿನ್ ಪಡೆದುಕೊಳ್ಳಲಿದೆ. ಇದು 61.12 ಅಶ್ವಶಕ್ತಿ (62 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಇರಲಿದೆ.

ಇದರಲ್ಲಿ ಗ್ರಾಹಕರು ತಮ್ಮ ಇಚ್ಚೆಗನುಸಾರವಾಗಿ ಎಬಿಎಸ್ ಅಥವಾ ಎಬಿಎಸ್ ಇಲ್ಲದ ಮಾದರಿಯನ್ನು ಆಯ್ಕೆ ಮಾಡಬಹುದಾಗಿದೆ. ಅಲ್ಲದೆ ಕ್ಯಾಂಡಿ ಲೈಮ್ ಗ್ರೀನ್, ಫ್ಲ್ಯಾಟ್ ಎಬೊನಿ ಮತ್ತು ಪಿಯರ್ಲ್ ಕ್ರೈಸ್ಟಲ್ ವೈಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ.

Kawasaki

ಕವಾಸಕಿ ವುಲ್ಕನ್ ಸಾಂಪ್ರಾದಾಯಿಕ ಕ್ರೂಸರ್‌ಗಳಿಗಿಂತ ಭಿನ್ನವಾಗಿರಲಿದೆ. ಇದರಲ್ಲಿ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಇದು ಹರ್ಲಿ ಡೇವಿಡ್ಸನ್ 750 ಮಾದರಿಗಳಿಗೆ ಸ್ಪರ್ಧೆ ಒಡ್ಡಲಿದೆ.

2014 ನವಂಬರ್‌ನಲ್ಲಿ ನಡೆಯಲಿರುವ ಮಿಲಾನ್ ಆಟೋ ಶೋದಲ್ಲಿ ಪ್ರದರ್ಶನ ಕಾಣಲಿರುವ ಕವಾಸಕಿ ಬೈಕ್ ಅಮೆರಿಕದಲ್ಲಿ 4.28 ಲಕ್ಷ ರು.ಗಳಿಂದ 4.52 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಲಿದೆ. ಇದು ನಿಕಟ ಭವಿಷ್ಯದಲ್ಲೇ ಭಾರತವನ್ನು ತಲುಪಲಿದೆ.

Article Published On: Tuesday, October 28, 2014, 17:12 [IST]
English summary
Japanese two-wheeler giant Kawasaki recently launched its Z250 and ER-6N motorcycles in India. It also showcased its much awaited Ninja H2R super bike model with a supercharged engine. Now they have revealed to us their upcoming cruiser bike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+