ಭಾರತಕ್ಕೆ ಬರುತ್ತೆ ಕೆಟಿಎಂ 1050 ಸಿಸಿ ಪವರ್‌ಫುಲ್ ಬೈಕ್

By Nagaraja

ನೀವು ಮೋಜಿನ ಬೈಕ್ ಸವಾರಿಯನ್ನು ಇಷ್ಟಪುಡುವುದಾದ್ದಲ್ಲಿ ಈ ಸುದ್ದಿಯನ್ನು ಖಂಡಿತ ಇಷ್ಟಪಡಲಿದ್ದಾರೆ. ಹೌದು ಗರಿಷ್ಠ ನಿರ್ವಹಣೆಯ ಬೈಕ್‌ಗಳನ್ನು ಉತ್ಪಾದಿಸುವುದರಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಆಸ್ಟ್ರೀಯಾ ಮೂಲದ ಕೆಟಿಎಂ ಸಂಸ್ಥೆಯು ಭಾರತಕ್ಕೆ ಮಗದೊಂದು ಆಕರ್ಷಕ ಮಾದರಿಯನ್ನು ಪರಿಚಯಿಸಲು ಹೊರಟಿದೆ.

ಈಗಾಗಲೇ 2014 ಇಐಸಿಎಂಎ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಕೆಟಿಎಂ 1050 ಅಡ್ವೆಂಚರ್ ಬೈಕ್ ಭಾರತವನ್ನು ನಿಕಟ ಭವಿಷ್ಯದಲ್ಲೇ ತಲುಪಲಿದೆ.


ಎಂಟ್ರಿ ಲೆವೆಲ್ ಅಡ್ವೆಂಚರ್ ಬೈಕ್‌ಗಳಲ್ಲಿ ಗುರುತಿಸಿಕೊಳ್ಳಲಿರುವ ಕೆಟಿಎಂ ಹೊಸ ಬೈಕ್‌ನಲ್ಲಿ 1050 ಸಿಸಿ ಎಂಜಿನ್ ಆಳವಡಿಸಲಾಗಿದೆ. ಇದು ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ಪ್ರಸ್ತುತ ಎಂಜಿನ್ 95 ಪಿಎಸ್ ಪೀಕ್ ಪವರ್ ಉತ್ಪಾದಿಸಲಿದೆ. ಇತರ ಗರಿಷ್ಠ ನಿರ್ವಹಣೆಯ ಬೈಕ್‌ಗಳಿಗೆ ಹೋಲಿಸಿದರೆ ಇದು ಹೆಚ್ಚು ಇಂಧನ ಕ್ಷಮತೆ ನೀಡಲಿದೆ.

KTM 1050 Adventure

ಕೆಟಿಎಂನ ರೈಡ್-ಬೈ-ವೈರ್ ಥ್ರೊಟಲ್ ಹೊಂದಿರುವ ಈ ಬೈಕ್ ಮೂರು ಚಾಲನಾ ಮೋಡ್‌ಗಳನ್ನು ಪಡೆದುಕೊಳ್ಳಲಿದೆ. ಅವುಗಳೆಂದರೆ ಸ್ಪೋರ್ಟ್, ಸ್ಟ್ರೀಟ್ ಮತ್ತು ರೈನ್. ಅಂತೆಯೇ ಬಾಷ್ ಟು ಚಾನೆಲ್ ಎಬಿಎಸ್ ವ್ಯವಸ್ಥೆಯನ್ನು ಪಡೆಯಲಿದೆ.

212 ಕೆ.ಜಿ ತೂಕವನ್ನು ಹೊಂದಿರುವ ಕೆಟಿಎಂ ಬೈಕ್ ಯುರೋಪ್‌ನಲ್ಲಿ 10 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಇನ್ನು ಭಾರತದಲ್ಲೇ ಜೋಡಣೆ ಕಾರ್ಯ ನಡೆದರೆ ಇದಕ್ಕೆ ಸಮಾನವಾದ ಬೆಲೆಯನ್ನು ದೇಶದಲ್ಲೂ ನಿರೀಕ್ಷಿಸಬಹುದಾಗಿದೆ.

Article Published On: Friday, November 21, 2014, 16:08 [IST]
English summary
Austrian motorcycle manufacturer KTM, had showcased the India bound KTM 1050 Adventure at EICMA 2014, soon after the 1290 Super Adventure.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+