ಕೆಟಿಎಂ ಆರ್‌ಸಿ 390, ಆರ್‌ಸಿ 200 ಬಿಡುಗಡೆಗೆ ಕ್ಷಣಗಣನೆ
ಭಾರತದ ಬೈಕ್ ವಾಹನ ಪ್ರೇಮಿಗಳು ಕಾದು ಕುಳಿತಿರುವ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಹಾಗೂ ಆರ್‌ಸಿ 200 ಮಾದರಿಗಳ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂಬಂಧ ನೇರ ಯೂಟ್ಯೂಬ್ ವೆಬ್ ಲಿಂಕನ್ನು ಸಹ ಸಂಸ್ಥೆ ತೆರೆದುಕೊಂಡಿದೆ.
ನೂತನ ಕೆಟಿಎಂ ಆರ್‌ಸಿ 390 ಹಾಗೂ ಆರ್‌ಸಿ 200 ಮಾದರಿಗಳನ್ನು 2014 ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ. ಪ್ರಸ್ತುತ ಬೈಕ್ ಬಜಾಜ್ ಆಟೋ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗಿದೆ.

ಕೆಟಿಎಂನ ಈ ಬಹುನಿರೀಕ್ಷಿತ ಮಾದರಿಗಳು ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಂಬಿಕೆಯಿದೆ. ಇದರ ಏರೋಡೈನಾಮಿಕ್ ದೇಹ ಶೈಲಿಯು ಹೆಚ್ಚು ಕ್ರೀಡಾತ್ಮಕ ವಿನ್ಯಾಸಕ್ಕೆ ಕಾರಣವಾಗಿದೆ.
ಅಂದ ಹಾಗೆ ಸೆಪ್ಟೆಂಬರ್ 9 ಬೆಳಗ್ಗೆ ಗಂಟೆ 11.45ಕ್ಕೆ ಸರಿಯಾಗಿ ಕೆಟಿಎಂ ಹೊಸ ಬೈಕ್‌ಗಳ ಬಿಡುಗಡೆಯಾಗಲಿದೆ. ಕೆಟಿಎಂ ಆರ್‌ಸಿ 390 ಮತ್ತು ಆರ್‌ಸಿ 200 ನೇರ ಪ್ರಸಾರಕ್ಕಾಗಿ ಕೆಳಗೆ ಕೊಟ್ಟಿರುವ ಯೂಟ್ಯೂಬ್ ಲಿಂಕ್ ವೀಕ್ಷಿಸಿರಿ.


Click it and Unblock the Notifications








